Ad imageAd image
- Advertisement -  - Advertisement -  - Advertisement - 

ನಕಲಿ ವೈದ್ಯನ ಹತ್ತಿರ ಪತ್ರಕರ್ತನ ಐಡಿ ಕಾರ್ಡ್ ಪತ್ತೆ… ಇದರ ರಹಸ್ಯವೇನು?

Bharath Vaibhav
ನಕಲಿ ವೈದ್ಯನ ಹತ್ತಿರ ಪತ್ರಕರ್ತನ ಐಡಿ ಕಾರ್ಡ್ ಪತ್ತೆ… ಇದರ ರಹಸ್ಯವೇನು?
WhatsApp Group Join Now
Telegram Group Join Now

ಕಲಘಟಗಿ:- ಅರೆಮಲೆನಾಡು ಹಾಗೂ ತೊಟ್ಟಿಲ ನಗರಿ ಎಂದು ಹೆಸರಾದ ಕಲಘಟಗಿ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದಂತೆ ನಮ್ಮ ವಾಹಿನಿಯ ತನಿಖಾ ತಂಡ, ಜೋಡಳ್ಳಿ ಗ್ರಾಮದಲ್ಲಿ ವೀಕ್ಷಣೆಗೆ ತೆರಳಿದಾಗ ಡಾ ಪರಪ್ಪ ಎಲ್ ಗುರವ ನಕಲಿ ವೈದ್ಯನೊಬ್ಬ ಕಂಡುಬಂದಿದ್ದು, ಪ್ರಶ್ನಿಸಿದ ಕೂಡಲೇ ನಾನು ಒಬ್ಬ ಪತ್ರಕರ್ತ ಎಂದು ಐಡಿ ಕಾರ್ಡ್ ತೋರಿಸಿ ನಮ್ಮ ವಾಹಿನಿಯ ತನಿಕಾ ತಂಡವನ್ನೇ ಹಾದಿ ತಪ್ಪಿಸಲು ಮುಂದಾಗಿದ್ದಾರೆ.

ಪತ್ರಿಕಾ ಕಾರ್ಡ್ ಅನ್ನು ಪರಿಶೀಲಿಸಿದಾಗ, ಸಂಘಟನಾಶಕ್ತಿ ಪತ್ರಿಕೆಯ ಹೆಸರಿನಲ್ಲಿದ್ದೂ 2023 ರಿಂದ 2048 ರವರೆಗೆ ಸುಮಾರು 25 ವರ್ಷಗಳ ಕಾಲ ಅವಧಿಯ ಕಾರ್ಡ್ ಇರುವುದು ವಿಪರ್ಯಾಸ ಎನಿಸಿದೆ.

ಈ ರೀತಿ ಸಮಾಜಕ್ಕೆ ಮಾರಕವಾದ ಕೆಲಸ ಮಾಡುತ್ತಿರುವ ಈತ, ನಕಲಿ ವೈದ್ಯನೋ ಇಲ್ಲಾ ಅಸಲಿ ವೈದ್ಯನು ಅಥವಾ ಪತ್ರಕರ್ತನೋ ಎಂಬುದು ಹಿರಿಯ ಅಧಿಕಾರಿಗಳ ತನಿಖೆ ಮೂಲಕ ತಿಳಿದು ಬರಬೇಕಿದೆ.ಈ ಸುದ್ದಿ ಹೇಗೆ ಅನಿಸುತ್ತಿದೆ ಎಂದರೆ ಇವನು ನಕಲಿ ವೈದ್ಯನೋ ಇಲ್ಲ ಪತ್ರಕರ್ತನು ಯಾವ ವೃತ್ತಿಗೆ ಇವನು ಅನ್ಯಾಯ ಮಾಡುತ್ತಿದ್ದಾನೋ ಎಂಬುದು ಗೊತ್ತಾಗುತ್ತಿಲ್ಲ?

ಆದರೆ ಈಗ ಅವನು ವೈದ್ಯ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಲವಾರು ವರ್ಷಗಳಿಂದ ಸಾರ್ವಜನಿಕರ ಜೀವನದ ಜೊತೆ ವೈದ್ಯ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ನಮ್ಮ ವಾಹಿನಿಯ ತನಿಕಾ ತಂಡದ ಮೂಲಕ ಹಾಗೂ ಸಾರ್ವಜನಿಕರ ಮೂಲಕ ತಿಳಿದು ಬಂದಿದೆ ಹಾಗೂ ಅವರು ನಮ್ಮ ವಾಹಿನಿಯ ತನಿಕಾ ತಂಡ ಹೋದಾಗ ವೈದ್ಯನೆ ಎಂದು ಒಪ್ಪಿಕೊಂಡಿದ್ದಾನೆ ನಾನು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ ಆದರೆ ನಮ್ಮ ತನಿಕಾ ತಂಡ ಅವರಿಗೆ ಪ್ರಶ್ನಿಸಿದಾಗ ಅವರ ಹತ್ತಿರ ಗ್ರಾಮ ಕಚೇರಿ ತಾಲೂಕಾ ಕಚೇರಿ ಜಿಲ್ಲಾ ಕಚೇರಿ ಹಾಗೂ ರಾಜ್ಯ ಕಚೇರಿಗಳ ಯಾವುದೇ ಪ್ರಮಾಣ ಪತ್ರಗಳು ಕೇಳಿದರೆ ನಮಗೆ ಯಾವುದೇ ಪ್ರಮಾಣ ಪತ್ರಗಳನ್ನು ನೀಡದೇ ಇರುವುದು ವಿಪರ್ಯಾಸನ ಎಣಿಸುತ್ತಿದೆ.

ಆದರೆ ವಿಪರ್ಯಾಸ ಏನೆಂದರೆ ನಮ್ಮ ವಾಹಿನಿಯ ತಂಡ ನಕಲಿ ವೈದ್ಯರ ಆಸ್ಪತ್ರೆಗೆ ತನಿಖೆಗೆ ಹೋದ ಸಂದರ್ಭದಲ್ಲಿ ಔಷಧಿಗಳ ಭಂಡಾರವೇ ಅವರ ಹತ್ತಿರ ಇದ್ದು ಈ ಔಷಧಿಗಳನಾ ಅವರು ರೋಗಿಗಳಿಗೆ ನೀಡಲು ಪ್ರಮಾಣಪತ್ರವನ್ನು ಪಡೆದಿದ್ದಾರೋ ಇಲ್ಲವೋ ಎಂದು ತನಿಖೆಗಳ ಮೂಲಕ ತಿಳಿದು ಬರಬೇಕಾಗಿದೆ.

ಈ ರೀತಿ ಕಲಘಟಗಿ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಆಗುತ್ತಿರುವುದು ವಿಪರ್ಯಾಸ ಎನಿಸುತ್ತಿದೆ. ಆದರೆ ಈ ಸುದ್ದಿಯಲ್ಲಿ ಎರಡು ಅತಿ ದೊಡ್ಡ ವೃತ್ತಿಗಳಿಗೆ ಅವಮಾನ ಎಣಿಸುವಂತಹ ಕಾರ್ಯ ನಡೆಯುತ್ತಿದ್ದು ಕಂಡುಬಂದಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಹಾಗೂ ಮಾನ್ಯ ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ವೈದ್ಯಾಧಿಕಾರಿಗಳು ಇದರ ವಿರುದ್ಧ ಕ್ರಮ ಜರುಗಿಸುತ್ತಾರಾ ಎಂದು ಕಾದು ನೋಡಬೇಕಿದೆ.

ವರದಿ :-ನಿತೀಶಗೌಡ ತಡಸ

WhatsApp Group Join Now
Telegram Group Join Now
Share This Article
error: Content is protected !!