Ad imageAd image

ಸಂತ್ರಸ್ತರಿಗೆ ಬೇಕಿರುವುದು ಕಾಳಜಿ ಕೇಂದ್ರ ,ಗಂಜಿ ಕೇಂದ್ರಗಳಲ್ಲ. ಅವರಿಗೆ ಬೇಕಾಗಿರುವುದು ಶಾಶ್ವತ ಪುನರ್ವಸತಿ.

Bharath Vaibhav
ಸಂತ್ರಸ್ತರಿಗೆ ಬೇಕಿರುವುದು ಕಾಳಜಿ ಕೇಂದ್ರ ,ಗಂಜಿ ಕೇಂದ್ರಗಳಲ್ಲ. ಅವರಿಗೆ  ಬೇಕಾಗಿರುವುದು ಶಾಶ್ವತ ಪುನರ್ವಸತಿ.
WhatsApp Group Join Now
Telegram Group Join Now

ಚಿಕ್ಕೋಡಿ:-ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ಬೇಕಿರುವುದು ಕಾಳಜಿ ಕೇಂದ್ರ ಅಥವಾ ಗಂಜಿ ಕೇಂದ್ರಗಳಲ್ಲ. ಅವರಿಗೆ ಬೇಕಿರುವುದು ಶಾಸ್ವತ ಪುನರ್ವಸತಿ ಎಂಬುದು ಜನಪ್ರತಿನಿಧಿಗಳಿಗೂ ಹಾಗೂ ಅಧಿಕಾರಿಗಳಿಗೆ ಅರಿವಾಗುವುದು ಯಾವಾಗ ಎಂಬ ಪ್ರಶ್ನೆ ಸಂತ್ರಸ್ತರ ಪ್ರಶ್ನೆ.

ಮಹಾರಾಷ್ಟ್ರದ ಘಟ್ಟದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಮತ್ತೊಮ್ಮೆ ಕೃಷ್ಣಾನದಿ ತೀರದ ಗ್ರಾಮಗಳು ಪ್ರವಾಹದಲ್ಲಿ ಮುಳುಗುವ ಭೀತಿ ಆವರಿಸಿದೆ.

ಪ್ರವಾಹ ಬಂದೇರಗಿದ ಸಂದರ್ಭದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು, ಮುಖಂಡರು ವ್ಯಾಟ್ಸಾಪ್ ಮೆಸೆಜಗಳ ಮುಖಾಂತರ ನಿಮ್ಮೊಂದಿಗೆ ನಾವಿದ್ದೇವೆ ಹೆದರದಿರಿ ಎನ್ನುವ ಸ್ಟೇಟಸ್ ಗಳನ್ನು ಹಾಕಿ, ಬೆಂಬಲಿಗರಿಂದ ಫಾರ್ವರ್ಡ್ ಮಾಡಿಸಿ ಎರಡ್ಮೂರು ಹಾಡುಗಳನ್ನು ಅದಕ್ಕೆ ತಕ್ಕಂತೆ ಜೋಡಿಸಿ ಸ್ಟೇಟಸಗಳನ್ನಿಟ್ಟು ನಾವು ನದಿ ತೀರದ ಪ್ರವಾಹ ಸಂತ್ರಸ್ತರ ಪರವಾಗಿರುವವರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.

ಪ್ರವಾಹ ಬಂದಾಗ ಕಾಳಜಿ ಕೇಂದ್ರ ಅಥವಾ ಗಂಜಿ ಕೇಂದ್ರಗಳನ್ನು ತೆರೆಯುವಾಗ ಇರುವ ಕಾಳಜಿ ಕಳೆದ ಇಪ್ಪತ್ತು-ಇಪ್ಪತೇರಡು ವರ್ಷಗಳಿಂದ ಪ್ರವಾಹ ಸಂತ್ರಸ್ತರ ಬದುಕಿಗೊಂದು ಬಧ್ರವಾದ ನೆಲೆ ಒದಗಿಸಲು ನಮ್ಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಾಧ್ಯವಾಗದೇ ಇರುವುದು ವಿಷಾದನೀಯ.ಸರ್ಕಾರಗಳು ಯಾವ ಪಕ್ಷದೇ ಆಗಿರಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಒಂದು ಅಧಿಕಾರಕ್ಕೆ ಬಂದ ಮೇಲೆ ಮತ್ತೊಂದು ಆಗುತ್ತಿದೆ.

ಈ ಎಲ್ಲ ಪಕ್ಷಗಳ ಮೇಲಿರುವ ಭರವಸೆ ಹುಸಿಯಾಗಿದೆ.ಕೃಷ್ಣಾ ನದಿ ತೀರದ ಜನ ಅದೇಷ್ಟು ಸಹನಾಶೀಲರು ಅಂದರೆ ಪ್ರವಾಹದ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳನ್ನೊ ಜನಪ್ರತಿನಿಧಿಗಳನ್ನೊ ಶಪಿಸಿ, ನಮಗೆ ಶಾಸ್ವತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸುತ್ತಾರೆ.

ನದಿ ನೀರು ಮನೆ ಹೊಕ್ಕಿ ಪ್ರವಾಹ ಬಂದ ಮೇಲೆ ಎಲ್ಲವನ್ನು ಕಳೆದುಕೊಂಡು ಜೀವನ ಹೇಗೆ ? ಎನೂ? ಎಂದು ಸಂತ್ರಸ್ತರು ನೋವಿನಲ್ಲಿ ಇರುವಾಗ ಕೆಲವೊಂದಿಷ್ಟು ಜನರಿಗೆ ಪ್ರವಾಹದ ಸ್ಥಳಗಳು ಮೋಜಿನ ತಾಣಗಳಾಗಿ, ಸೆಲ್ಪಿ ಪಾಯಿಂಟಗಳಾಗಿ ಪರಿವರ್ತನೆಯಾಗುತ್ತವೆ.

ಮತ್ತೆ ನದಿ ನೀರು ಕಡಿಮೆಯಾಗಿ ಪ್ರವಾಹ ನಿಂತ ಮೇಲೆ ಸಂತ್ರಸ್ತರು ಮುಳುಗಡೆಯ ಸಂಕಷ್ಟಗಳೆಲ್ಲವನ್ನು ಮರೆತು, ಅಳಿದುಳಿದ ಪಾತ್ರೆ ಪಗಡೆಳನ್ನು ಜೋಡಿಸಿ ಊರಕಡೆ ಸೇರಿಕೊಂಡು ತಾವೆ ಶಪಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಾರು ತುರಾಯಿ ಅರ್ಪಿಸಿ ಸನ್ಮಾನಿಸುತ್ತಾರೆ.

ಪ್ರವಾಹ ಸಂದರ್ಬದಲ್ಲಿ ಅವರಿವರು ಅಷ್ಟೊ ಇಷ್ಟೊ ಕೊಟ್ಟದ್ದನ್ನು ನೆನಪಿಸಿಕೊಂಡು, ದೇವರಂತೆ ಕಾಣುವ ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಂತಾಗಿದ್ದು, ಶಾಸ್ವತ ಪುನರ್ವಸತಿ ಎನ್ನುವ ಹುಸಿ ಭರವಸೆಯನ್ನೆ ನಂಬಿರುವ, ಸಂತ್ರಸ್ತರಿಗೆ ಈಗಾಗಲೇ ಕೆಲವು ಕಡೆ ಗುರುತಿಸಿರುವ ನಿವೇಶನಗಳಲ್ಲಿ ಹಕ್ಕುಪತ್ರ ವಿತರಿಸಲು ಕುರ್ಚಿ ಕೆಳಗೆ ಇಟ್ಕೊಂಡು ಮೋಸ ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳುಕ್ರಮ ಕೈಗೊಳ್ಳಬೇಕು.

ಇದನ್ನೇ ಕುರಿತು ಒಬ್ಬ ಸಂತ್ರಸ್ತ ಮಾತನಾಡಿದ್ದಾರೆ ಬನ್ನಿ ಕೇಳೋಣ.ಕಳೆದ ಇಪ್ಪತ್ತು ವರ್ಷಗಳಿಂದ ಕೆಲವು ಕಡೆ ತಗಡಿನ ಶೆಡ್ ಗಳಲ್ಲಿ ಪ್ರಾಣಿಗಳ ತರಹ ವಾಸಿಸುತ್ತಿರುವವರಿಗೆ ಮಾನವೀಯತೆಯಿಂದಲಾರೂ ಸಂಬಂದಿಸಿದವರು ಹಕ್ಕುಪತ್ರ ವಿತರಿಸಬೇಕು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!