ಕಲಬುರಗಿ : ದೇಶದ ಸಂರಕ್ಷಣೆಗಾಗಿ, ದೇಶದ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಏನೇ ಕ್ರಮ ಕೈಗೊಂಡರೂ ನಾವು ಅವರ ಜೊತೆಗಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದ ಜೊತೆ ನಾವಿದ್ದೇವೆ.ಜನರ ನಿರೀಕ್ಷೆಗೆ ತಕ್ಕಂತೆ ಮೋದಿಯವರು ಕೆಲಸ ಮಾಡಬೇಕು. ಮೋದಿಯವರು ಏನೇ ತೀರ್ಮಾನ ತೆಗೆದುಮಕೊಂಡರೂ ನಾವು ಬೆಂಬಲಿಸುತ್ತೇವೆ ಎಂದರು.
‘ಪಹಲ್ಗಾಮ್ ದಾಳಿ ಬಳಿಕ ಮೋದಿಯವರನ್ನು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಅವುಗಳಿಗೆ ಉತ್ತರ ನೀಡುವ ಸಾಮರ್ಥ್ಯ ಮೋದಿಗೆ ಇಲ್ಲ. ಹೀಗಾಗಿ ಜನರು ಮತ್ತು ಮಾಧ್ಯಮದ ಗಮನವನ್ನು ಬೇರೆಡೆಗೆ ತಿರುಗಿಸಲು ಜಾತಿಗಣತಿ ಅಸ್ತ್ರ ಪ್ರಯೋಗಿಸಿದ್ದಾರೆ.
ಭಯೋತ್ಪಾದನೆ ದಾಳಿಗೆ ಪ್ರತಿಕ್ರಿಯೆಯಾಗಿ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದರೆ, ಇವರು ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ಗಳನ್ನು ಬ್ಯಾನ್ ಮಾಡಿದ್ದಾರೆ. ಪ್ರಧಾನಿ ಮೋದಿ ವರ್ತನೆ ಜನರಲ್ಲಿ ಬೇಸರ ಮೂಡಿಸಿದೆ ಎಂದು ಹೇಳಿದ್ದರು. ಪ್ರಿಯಾಂಕ್ ಖರ್ಗೆ ಮಾತು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.