Ad imageAd image

ಮನುಷ್ಯರು ಕಿಸ್ ಮಾಡೋಕೆ ಶುರು ಮಾಡಿದ್ದು ಯಾವಾಗ?

Bharath Vaibhav
ಮನುಷ್ಯರು ಕಿಸ್ ಮಾಡೋಕೆ ಶುರು ಮಾಡಿದ್ದು ಯಾವಾಗ?
WhatsApp Group Join Now
Telegram Group Join Now

ಮೈ ಜುಮ್ಮೆನಿಸುವ ಮುತ್ತು, ಮತ್ತೇರಿಸಿ ಕೊಲ್ಲುವ ಈ ಕಿಸ್‌, ಚುಂಬಿಸುವುದು ಮನುಷ್ಯರಿಗೆ ಯಾವಾಗ ರೂಡಿಯಾಯಿತು? ಹೇಗೆ ಯಾವಾಗ ಇದು ಆಳವಾದ ಪ್ರೀತಿಯ ಸಂಕೇತವಾಯಿತು?

ಮೈ ಜುಮ್ಮೆನಿಸುವ, ಮತ್ತೇರಿಸಿ ಕೊಲ್ಲುವ ಈ ಕಿಸ್‌ ಮಾಡುವುದು, ಚುಂಬಿಸುವುದು, ಹೇಗೆ ಯಾವಾಗಿನಿಂದ ಮನುಷ್ಯರಿಗೆ ರೂಡಿಯಾಯಿತು. ಯಾವಾಗ ಇದು ಆಳವಾದ ಪ್ರೀತಿಯ ಸಂಕೇತವಾಯಿತು?

ವೇದಗಳಲ್ಲಿಯೇ, ಸುಮಾರು 3500 ವರ್ಷಗಳ ಹಿಂದೆಯೇ ಚುಂಬನದ ಮಹತ್ವದ ಬಗ್ಗೆ ವಿವರಿಸಲಾಗಿದ. ಚುಂಬಿಸುವ ಕಲ್ಪನೆ ಮಾನವರಲ್ಲಿ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಎರಡು ಸಿದ್ಧಾಂತಗಳಿವೆ. ಮಾನವ ಮಕ್ಕಳಂತೆ ಚುಂಬಿಸುವ ಸಹಜ ಬಯಕೆ ಹೊಂದಿರುತ್ತಾನೆ.

 

ಮೊದಲನೆಯದಾಗಿ, ಮಗು ತನ್ನ ತುಟಿಗಳಿಂದ ತಾಯಿಯ ಎದೆ ಹಾಲನ್ನು ಹೀರುತ್ತದೆ. ತಾಯಿಯ ಸ್ತನವನ್ನು ಸ್ಪರ್ಶಿಸುವುದು ಮತ್ತು ಚುಂಬಿಸುವುದರ ನಡುವೆ ಆಳವಾದ ಸಂಬಂಧವಿದೆ.

ಎರಡನೆಯ ಸಿದ್ಧಾಂತವೆಂದರೆ ಚುಂಬಿಸುವ ಪರಿಕಲ್ಪನೆ ತಾಯಿಯು ಶಿಶುಗಳಿಗೆ ತನ್ನ ಬಾಯಿಂದ ಆಹಾರವನ್ನು ಅಗೆದು  ತಿನ್ನಿಸುತ್ತಿದ್ದಳು ಈಗಲೂ ಪಕ್ಷಿಗಳು ತಮ್ಮ ಮರಿಗಳಿಗೆ ಮಾಡುವುದು ಹೀಗೇ ಅಲ್ಲವೆ? ಇದರಿಂದ ಚುಂಬನ ಹುಟ್ಟಿಕೊಂಡಿರಬಹುದು.

 

ನಮ್ಮ ಪೂರ್ವಜರೆಂದು ಪರಿಗಣಿಸುವ ಚಿಂಪಾಂಜಿಗಳು ತಮ್ಮ ಮರಿಗಳಿಗೆ ಇದೇ ರೀತಿಯಲ್ಲಿ ಆಹಾರವನ್ನು ನೀಡುತ್ತವೆ. ಜನರು ಚುಂಬಿಸಲು ಇಷ್ಟಪಡುವ ಕಾರಣಗಳಲ್ಲಿ ಬಟ್ಟೆ ಕೂಡ ಒಂದು ಎಂದು ಜಾಂಕೋವಿಕ್ ಹೇಳಿಕೊಂಡಿದ್ದಾರೆ. ಪೂರ್ಣ ಬಟ್ಟೆಯಲ್ಲಿ ಚುಂಬನದ ಆಸಕ್ತಿ ಹೆಚ್ಚುತ್ತದೆ. ಕಡಿಮೆ ಬಟ್ಟೆಯಲ್ಲಿ ಅಷ್ಟೊಂದು ಆಸಕ್ತಿ ಇರುವುದಿಲ್ಲ ವಂತೆ. ಜಾಂಕೋವಿಕ್ ಅವರು “ಮನುಷ್ಯನು ಚುಂಬನದಿಂದ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ತೃಪ್ತಿ ಹೊಂದುತ್ತಾನೆ. ಚುಂಬನದ ಹಿಂದಿನ ಕಾರಣವು ಎಲ್ಲರಿಗೂ ಪ್ರಣಯ ತೃಪ್ತಿಯಾಗಿರುವುದಿಲ್ಲ” ಎನ್ನುತ್ತಾರೆ.

ಲೇಖಕಿ ಶೆರಿಲ್ ಕಿಶ್ನೆಬೌಮ್ ಎಂಬವರು ಹೇಳುವಂತೆ, ತುಟಿಗಳನ್ನು ಚುಂಬಿಸುವ ಸಂಸ್ಕೃತಿಯಿಲ್ಲದ ಜನರು ಇನ್ನೂ ಬೇರೆ ರೀತಿಯಲ್ಲಿ ಲೈಂಗಿಕ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಚಾರ್ಲ್ಸ್‌ ಡಾರ್ವಿನ್, ಮಲಯ ದ್ವೀಪದ ಚುಂಬನವನ್ನು ವಿವರಿಸುತ್ತಾನೆ: “ಪುರುಷರು ಕುಳಿತಿರುವ ಮಹಿಳೆಯರ ಮೇಲೆ ಬಾಗಿ ಪರಸ್ಪರರ ಪರಿಮಳವನ್ನು ಹೀರಿ ಆನಂದಿಸುತ್ತಾರೆ” ಎನ್ನುತ್ತಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!