ಸಿಂಧನೂರು : ಮೇ 16 ರಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಸಮಿತಿ ಸಿಂಧನೂರು ನಗರದ ಮಿನಿ ವಿಧಾನಸೌಧ ಕಛೇರಿ ಮುಂದೆ ಪತ್ರ ಚಳುವಳಿ ನಡೆಸಿ ತಾಲೂಕಾಧ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಮನಸೋ ಇಚ್ಛೆ ಡೊನೇಷನ್ ಹಾಗೂ ಶುಲ್ಕ ವಸೂಲಿಗೆ ಮುಂದಾಗಿದ್ದಾರೆ ಕೂಡಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟಿಸಿ ಗ್ರೇಡ್ 2 ತಹಸೀಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು ಎಂದು ತಾಲೂಕು ಘಟಕದ ಅಧ್ಯಕ್ಷ ವಿರುಪಾಕ್ಷಿ ಸಾಸಲಮರಿ ತಿಳಿಸಿದ್ದಾರೆ.
ನಂತರ ಅವರು ಮಾತನಾಡಿ ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಸರ್ಕಾರದ ನಿಯಮವನ್ನು ಮೀರಿ ಹೆಚ್ಚಿನ ಶುಲ್ಕ ಹಾಗೂ ಡೊನೇಷನ್ ಸುಲಿಗೆಗೆ ಮುಂದಾದರೂ ಶಿಕ್ಷಣ ಇಲಾಖೆಯು ಜಿಲ್ಲೆಯ ಹಾಗೂ ಹಾಗೂ ಪದವಿ ಪೂರ್ವ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದು ನಮಗೆ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ 2025- 26 ನೇ ಸಾಲಿನಲ್ಲಿ ಪ್ರವೇಶ ಶುಲ್ಕ ಸಮವಸ್ತ್ರ ಶೂ ಸಾಕ್ಸ್ ಟೈ ಬೆಲ್ಟ್ ಬೋಧನಾ ಬುಕ್ ನೋಟ್ಸ್ ಹೀಗೆ ಸೇರಿದಂತೆ ವಿವಿಧ ವಸ್ತುಗಳ ಶುಲ್ಕವನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಖಾಸಗಿ ಕಾಲೇಜುಗಳು ಹಾಗೂ ಶಾಲೆಗಳು ಮುಂದಾಗಿವೆ ಇದಕ್ಕೆ ಕಡಿವಾಣ ಇಲ್ಲವೇ ಎಂದು ತಹಶೀಲಾರ್ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ. ಕೆ.ಶಂಕರ್ ನಂದಿಹಾಳ ಕಲ್ಯಾಣ ಕರ್ನಾಟಕ ಉಸ್ತುವಾರಿ. ವಿರುಪಾಕ್ಷಿ ಸಾಸಲಮರಿ ತಾಲೂಕ ಅಧ್ಯಕ್ಷರು. ಮಲ್ಲಿಕಾರ್ಜುನ್ ಕುನ್ನಟಗಿ. ಸಿದ್ದರಾಮೇಶ್ವರ ಸುಲ್ತಾನಾಪುರ. ಮುದುಕಪ್ಪ ಹೊಸಳ್ಳಿ ಕ್ಯಾಂಪ್. ನಾಗಲಿಂಗ ಜವಳಗೇರಾ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.



		
		
		
