Ad imageAd image

ಡೇಂಜರ್ ಜೋನ್ ನಲ್ಲಿರುವ ಮಲಪ್ರಭಾ ನದಿಯ ಶಿಥಿಲಗೊಂಡ ನೀಲಾವಡೆ Pwd ಸೇತುವೆಗೆ ಕಾಯಕಲ್ಪ ಯಾವಾಗ

Bharath Vaibhav
ಡೇಂಜರ್ ಜೋನ್ ನಲ್ಲಿರುವ ಮಲಪ್ರಭಾ ನದಿಯ ಶಿಥಿಲಗೊಂಡ ನೀಲಾವಡೆ Pwd ಸೇತುವೆಗೆ ಕಾಯಕಲ್ಪ ಯಾವಾಗ
WhatsApp Group Join Now
Telegram Group Join Now

ಖಾನಾಪುರ:- ಕಿತ್ತೂರು ಕರ್ನಾಟಕದ ಜೀವನದಿ ಮಲಪ್ರಭೆಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕನಕುಂಬಿಯಲ್ಲಿ ಹುಟ್ಟಿ ನೀಲಾವಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬಾ ಕಿರಿದಾದ, ಪ್ರಸ್ತುತ ತುಂಬಾ ಶಿಥಿಲಗೊಂಡು ಅಪಾಯಕ್ಕೆ ಎಡೆಮಾಡಿಕೊಟ್ಟಿರುವ ಕಿರಿದಾದ ಸೇತುವೆ ಮೂಲಕ ಹರಿದು ಖಾನಾಪುರ ಪಟ್ಟಣಕ್ಕೆ ಪ್ರವೇಶ ಮಾಡುತ್ತದೆ.

ಆದ್ರೇ ಅದ್ಯಾಕೋ ಏನೋ ಗೊತ್ತಿಲ್ಲಾ ಇಷ್ಟೆಲ್ಲಾ ಶಿಥಿಲಗೊಂಡು ತುಂಬಾನೇ ಡೇಂಜರ್ ಜೋನ್ ನಲ್ಲಿದ್ದರೂ ಈ ಮಲಪ್ರಭಾ ನದಿಯ ಲೋಕೋಪಯೋಗಿ ಇಲಾಖೆ ಸೇತುವೆಗೆ ಮಾತ್ರ ಕಾಯ ಕಲ್ಪ ನೀಡಿಲ್ಲಾ, ಇದರಿಂದ ಈ ಸೇತುವೆಯ ಮೂಲಕವೇ ದಿನ ನಿತ್ಯ ನೀಲಾವಡೆ, ಕಬನಾಳೆ, ಮೊಗವಡೆ, ಅಂಬೋಳಿ ಗ್ರಾಮಗಳ ಗ್ರಾಮಸ್ಥರು ಸಂಚಾರ ಮಾಡುತ್ತಿದ್ದು, ಈ ಸೇತುವೆ ಬಂತೆಂದೇರೆ ಸಾಕು ಜೀವ ಭಯದಲ್ಲೇ ಸಂಚಾರ ಮಾಡಬೇಕಿದೆ, ನದಿಯ ಹರಿವಿನ ಪ್ರಮಾಣ ಹೆಚ್ಚಾದ್ರೆ ಸಂಪರ್ಕವೇ ಕಡಿತವಂತೆ.

ಇದರಿಂದ ದಿನನಿತ್ಯ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗ್ತಾ ಇದೆಯಂತೆ, ಇದನ್ನು ದುರಸ್ತಿ ಪಡಿಸುವಂತೆ ಈ ಭಾಗದ ಗ್ರಾಮಸ್ಥರು ಪದೇ ಪದೇ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲವಂತೆ. ಇನ್ನೂ ಇಷ್ಟೆಲ್ಲಾ ಸಮಸ್ಯೆಯಿದ್ರೂ ಇಲ್ಲಿಯವರೆಗೂ ಖಾನಾಪುರ ಭಾಗದ ಜನಪ್ರತಿನಿಧಿಗಳು ಹಾಗೂ pwd ಅಭಿಯಂತರರು ಇಲ್ಲಿಯವರೆಗೂ ಇದರ ಕಾಯಕಲ್ಪಕ್ಕೆ ಮುಂದಾಗದೇ ಇರೋದು ನೋಡಿದ್ರೆ ಬಾರಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಡೇಂಜರ್ ಸೇತುವೆಗೆ ಟ್ರೀಟ್ ಮೆಂಟ್ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

 ವರದಿ:- ಬಸವರಾಜು.

WhatsApp Group Join Now
Telegram Group Join Now
Share This Article
error: Content is protected !!