ನವದೆಹಲಿ: ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಎಡಗೈ ಬ್ಯಾಟುಗಾರ ಸಾಯಿ ಸುದರ್ಶನ ಭಾರತ ಕ್ರಿಕೆಟ್ ವಲಯದಲ್ಲಿ ಗಮನ ಸೆಳೆದಿರುವ ಆಟಗಾರರಲ್ಲಿ ಒಬ್ಬರು.
ತಮಿಳುನಾಡಿನ 23 ವರ್ಷದ ಎಡಗೈ ಆಟಗಾರ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಪ್ರತಿಭಾವಂತ ಎಡಗೈ ಆಟಗಾರ ಕಠಿಣ ಅಭ್ಯಾಸ ನಡೆಸಿದ್ದಾರೆ. ಇದರಿಂದ ಉನ್ನತ ಮಟ್ಟದ ಕ್ರಿಕೆಟ್ ನಲ್ಲಿ ಅವರಿಗೆ ಯಶಸ್ಸು ಸಿಗುತ್ತಿದೆ. ಲೆಗ್ ಸ್ಪಿನ್ನರ ಕೂಡ ಆಗಿರುವ ಸಾಯಿ ಸುದರ್ಶನ್ ಸತತ ುತ್ತಮ ನಿರ್ವಹಣೆಯ ತೋರುವ ಇರಾದೆ ಹೊಂದಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ಬಯಸಿರುವ ಈ ಆಕರ್ಷಕ ಶೈಲಿಯ ಆಟಗಾರ ಕಠಿಣ ಪರಿಶ್ರಮ ಹಾಗೂ ಸತತ ುತ್ತಮ ಪ್ರದರ್ಶನವಂತೂ ನೀಡುತ್ತಿದ್ದಾರೆ. ಆಯ್ಕೆಗಾರರು ಯಾವಾಗ ಅವರಿಗೆ ಅವಕಾಶ ನೀಡುತ್ತಾರೋ ಕಾಯ್ದುನೋಡಬೇಕಷ್ಟೇ.