ಚನ್ನಮ್ಮನ ಕಿತ್ತೂರು: ಭಾರತ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪಥಮ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ ಆಗುವುದು ಯಾವಾಗ? ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಎಲ್ಲಿದ್ದೀರಿ ಏನ್ ಮಾಡ್ತಾ ಇದ್ದೀರಿ ಕಿತ್ತೂರ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಹೆಸರು ನಾಮಕರಣ ಮಾಡಲು ಯಾಕೆ ಹಿಂದೆಟು ಹಾಕುತ್ತಿದ್ದೀರಿ ಚನ್ನಮ್ಮನ ಇತಿಹಾಸ ತ್ಯಾಗ ಬಲಿದಾನ ಹೋರಾಟ ಸರ್ಕಾರಕ್ಕೆ ನೆನಪಾಗುವುದು ಕಿತ್ತೂರು ಉತ್ಸವ ಬಂದಾಗ ಮಾತ್ರ ಕಿತ್ತೂರು ಉತ್ಸವದಲ್ಲಿ ಎಲ್ಲ ಜನ ಪ್ರತಿನಿಧಿಗಳು ಚನ್ನಮ್ಮನ ಬಗ್ಗೆ ಹಾಡಿ ಹೊಗಳಿ ಹೋಗುತ್ತಾರೆ ಆದರೆ ಕಿತ್ತೂರ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ ಮಾಡಲು ಯಾಕೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದ್ದೀರಿ ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ ಮಾಡಿ ಈ ಭಾಗ್ಯವನ್ನು ಯಾಕೆ ಕೊಡುತ್ತಿಲ್ಲ ಸಿದ್ದರಾಮಯ್ಯನವರೇ
ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಈ ವಿಷಯದ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಬಂದು ಹಲವು ವರ್ಷಗಳು ಕಳೆದರೂ ತಾವು ಈ ವಿಷಯವನ್ನು ಸಂಪುಟ ಸಭೆಯಲ್ಲಿ ಅನುಮೋದನೆ ಯಾಕೆ ನೀಡುತ್ತಿಲ್ಲ. ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಬೆಳಗಾವಿಗೆ ಇದೆ ಪೆಬ್ರುವರಿ 28 ರಂದು ಆಗಮಿಸುತ್ತಿದ್ದಾರೆ ಈ ಒಂದು ಸಂದರ್ಭದಲ್ಲಿ ಸಚಿವರು ಈ ಒಂದು ವಿಷಯ ಪ್ರಸ್ತಾಪ ಮಾಡಿ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ ಮಾಡುತ್ತಾರೆ ಅಂತ ಈ ಭಾಗದ ಜನ ಕಾಯುತ್ತಿದ್ದಾರೆ. ಸರ್ಕಾರಕ್ಕೆ ಹಲವು ಭಾರಿ ರಾಣಿ ಚನ್ನಮ್ಮನ ಭಾರತ ಸೇನೆ ಮನವಿ ಸಲ್ಲಿಸಿದರು ಸಹ ಈ ಭಾಗದ ಜನಪ್ರತಿನಿಧಿಗಳು ಮತ್ತು ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ವಾಯುವ್ಯ ಸಾರಿಗೆ ಇಲಾಖೆ ಅಧ್ಯಕ್ಷರಾದ ರಾಜು ಕಾಗೆ ಅವರ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಕಿತ್ತೂರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಠರಾವು ಪಾಸ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಸಹ ಈ ಭಾಗದ ಜನ ಪ್ರತಿನಿಧಿಗಳು ಮತ್ತು ಸರ್ಕಾರ ಏನು ಮಾಡ್ತಾ ಇದೆ ಈ ವಿಷಯದ ಬಗ್ಗೆ ಸಚಿವ ಸಂಪುಟದಲ್ಲಿ ಈ ಭಾಗದ ಶಾಸಕರು ಸಚಿವರು ಈ ವಿಷಯದ ಬಗ್ಗೆ ವಿಷಯವನ್ನು ಯಾಕೆ ಪ್ರಸ್ತಾಪ ಮಾಡುತ್ತಿಲ್ಲ. ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಚಿವರು ಶಾಸಕರು ಈ ವಿಷಯದ ಬಗ್ಗೆ ವಿಷಯ ಪ್ರಸ್ತಾಪ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಮಾತ್ರ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಉತ್ತರ ಕರ್ನಾಟಕ ಭಾಗದ ಸಚಿವರು ಶಾಸಕರು ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಯಾಕೆ ಮೌನವಹಿಸಿದ್ದೀರಿ.
ಈಗ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಹೆಸರು ನಾಮಕರಣ ಮಾಡಲು ಈ ಭಾಗದ ಜನಪ್ರತಿನಿಧಿಗಳು ಸಾರಿಗೆ ಸಚಿವರ ಮೇಲೆ ಒತ್ತಾಯ ಮಾಡ್ತಾರ ಅಂತ ಕಾದು ನೋಡಬೇಕು?
ನಾಡಿದ್ದು ಸಾರಿಗೆ ಸಚಿವರು ಬೆಳಗಾವಿಗೆ ಕಿತ್ತೂರ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಹೆಸರು ನಾಮಕರಣ ಆಗುವುದು ಯಾವಾಗ?




