Ad imageAd image

ಕಲಬೆರಕೆ ಶೇಂದಿ ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ಗಡಿಭಾಗದಲ್ಲಿ ಕಡಿವಾಣ ಯಾವಾಗ.?

Bharath Vaibhav
ಕಲಬೆರಕೆ ಶೇಂದಿ ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ಗಡಿಭಾಗದಲ್ಲಿ ಕಡಿವಾಣ ಯಾವಾಗ.?
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಗಡಿಭಾಗ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಕಲಬೆರಕೆ ಶೇಂದಿ ಮಾರಾಟಗಾರರು ರಾಜಾರೋಷವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಹಳ್ಳಿಯ ರೈತ ಜನರು ಅವುಗಳನ್ನು ವ್ಯಸನವಾಗಿಸಿಕೊಂಡು ತಮ್ಮ ಜೀವನವನ್ನೇ ಹಾಳುಮಾಡಿಕೊಳುತ್ತಿದ್ದಾರೆ ಎಂದು ಗಡಿಭಾಗ ಗ್ರಾಮಗಳ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದೀಗಲೇ ಅನೇಕ ಬಾರಿ ವೈಯಕ್ತಿಕವಾಗಿ ಅಬಕಾರಿ ಇಲಾಖೆಯವರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲಬೆರಕೆ ಶೇಂದಿ ಮಾರಾಟ ಮಾಡಿದ್ದಲ್ಲದೆ ಖಾಲಿ ಕವರ್ ಪ್ಯಾಕೆಟ್ ಗಳನ್ನು ರಸ್ತೆಗಳ ಬದಿಯಲ್ಲೇ ರಾಜಾರೋಷವಾಗಿ ಹಾಕುತ್ತಿದ್ದಾರೆ ಎಂದರೆ ಇವರಿಗೆ ಸ್ವಲ್ಪ ಕೂಡ ಅಧಿಕಾರಿಗಳ ಬಗ್ಗೆಯಾಗಲಿ ಅಥವಾ ಕಾನೂನಿನ ಬಗ್ಗೆ ಆಗಲಿ ಭಯವೆಂಬುದು ಇಲ್ಲಾದಂತೆ ಕಾಣುತ್ತಿದೆ.

ಇಷ್ಟೆಲ್ಲಾ ನಡೆತಿದ್ದರು ಸಹ ಅದಿಕಾರಿಗಳು ಸುಮ್ಮನೆ ಇದ್ದಿದ್ದು ಯಾಕೆ ಎಂಬುದು ಸಂಶಯ ಉಂಟಾಗಿದೆ. ಇದರಲ್ಲಿ ಅಧಿಕಾರಗಳ ಕೈವಾಡ ಇರಬಹುದೇ ಎಂಬ ಅನುಮಾನಗಳು ಸಹ ಮೂಡಿಬರುತ್ತಿವೆ ಸಾರ್ವಜನಿಕರಲ್ಲಿ.

ಅದಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ಮತ್ತು ಕಲಬೆರಕೆ ಶೇಂದಿ ಮಾರಾಟರಗಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!