Ad imageAd image

ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ಜಾತ್ಯತೀತ ಹಾಗೂ ಸಮಾಜವಾದ ಎಲ್ಲಿದೆ : ಆರ್ ಅಶೋಕ್ 

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಸಂವಿಧಾನಕ್ಕೆ 68 ಬಾರಿ ತಿದ್ದುಪಡಿ ತಂದ ಕಾಂಗ್ರೆಸ್‌, ಜಾತ್ಯತೀತ ಪದದ ಬಗ್ಗೆ ಮಾತನಾಡುತ್ತಿದೆ. ಆದರೆ ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದು ಕಾಂಗ್ರೆಸ್‌ನವರು ಸೇರಿಸಿದ ಪದಗಳ ಬಗ್ಗೆ.ನಾನು ಒಕ್ಕಲಿಗ ಎಂದು ಗುರುತಿಸಿಕೊಳ್ಳುತ್ತೇನೆ. ಎಲ್ಲರೂ ಅವರ ಜಾತಿಯನ್ನು ಗುರುತಿಸಿಕೊಳ್ಳುತ್ತಾರೆ.

ಅಂದಮೇಲೆ ಜಾತ್ಯತೀತ ಎಂಬುದಕ್ಕೆ ಅರ್ಥವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ಜಾತ್ಯತೀತ ಹಾಗೂ ಸಮಾಜವಾದ ಎಂಬ ಪದ ಎಲ್ಲಿದೆ ಎಂದು ಕಾಂಗ್ರೆಸ್‌ ನಾಯಕರು ತೋರಿಸಲಿ. ರಾಹುಲ್‌ ಗಾಂಧಿ ಒಂದು ಕಡೆ ಜಾತಿ ಸಮೀಕ್ಷೆ ಬೇಕೆಂದು ಹೇಳುತ್ತಾರೆ. ನಂತರ ಜಾತ್ಯತೀತ ಎನ್ನುತ್ತಾರೆ.

ಜವಹರಲಾಲ್‌ ನೆಹರು ಅವರು ಒಂದನೇ ತಿದ್ದುಪಡಿ ತಂದರು. ಒಟ್ಟು 17 ತಿದ್ದುಪಡಿಗಳನ್ನು ಅವರು ಮಾಡಿದ್ದಾರೆ. ನಂತರ ಬಂದ ಇಂದಿರಾಗಾಂಧಿ 26 ತಿದ್ದುಪಡಿ ಮಾಡಿದ್ದಾರೆ. ಬಾಬಾ ಸಾಹೇಬರ ಮೂಲ ಆಶಯಗಳನ್ನೇ ತಿದ್ದುಪಡಿ ಮಾಡಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ 68 ತಿದ್ದುಪಡಿಗಳನ್ನು ಮಾಡಿದೆ ಎಂದರು.

ತುರ್ತು ಪರಿಸ್ಥಿತಿ ತರಬೇಕೆಂದು ಯಾವ ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ಎಂದು ಕಾಂಗ್ರೆಸ್‌ ಹೇಳಬೇಕು. ಕಾಂಗ್ರೆಸ್‌ನವರು ಕುತಂತ್ರ ಮಾಡಿ ಈ ಎರಡೂ ಪದಗಳನ್ನು ಸೇರಿಸಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!