ಬಾಗಲಕೋಟೆ : ಟಿಪ್ಪು ಔರಂಗಜೇಬ್ ವಿರುದ್ಧ ಯತ್ನಾಳ್ ಹೇಳಿಕೆಗೆ, ಯತ್ನಾಳ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದ್ದು, ದೇಶ ಕಂಡ ವೀರ ಧೀರ ಟಿಪ್ಪು ಸುಲ್ತಾನ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ.ಇದು ಯತ್ನಾಳ್ ಅವರ ಸೌಜನ್ಯತೆ ತೋರಿಸಿ ಕೊಡುತ್ತದೆ.
ಟಿಪ್ಪು ಸುಲ್ತಾನ್ ಯಾರಿಗೆ ಹುಟ್ಟಿದ್ದ? ಎಂದು ಯತ್ನಾಳ್ ನಿಂದಿಸಿದ್ದಾರೆ. ಹಾಗಾದರೆ ಇವರು ಯಾರಿಗೆ ಹುಟ್ಟಿದ್ದಾರೆ? ಎಂದು ಕಾಶಪ್ಪನವರ ಪ್ರಶ್ನಿಸಿದ್ದಾರೆ.
ಇವರು ಈ ದೇಶದವರಿಗೆ ಹುಟ್ಟಿದ್ರಾ ಅಥವಾ ಬೇರೆ ದೇಶದವರಿಗೆ ಹುಟ್ಟಿದ್ರ? ಬಿಜೆಪಿಯವರು ಧರ್ಮದ ಆಧಾರದಲ್ಲಿ ಮಾತನಾಡುವುದನ್ನು ಮೊದಲು ಬಿಡಬೇಕು ಎಂದು ಅವರು ಕಿಡಿ ಕಾರಿದರು.
ಪ್ರಜಾಪ್ರಭುತ್ವ, ಜಾತ್ಯಾತೀತ, ತತ್ವ ಸಿದ್ಧಾಂತದ ಬಗ್ಗೆ ಅರಿತುಕೊಳ್ಳಲಿ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವವರಿಗೆ ಗೌರವ ಇದೆಯಾ ಸಂವಿಧಾನದ ಮೇಲೆ ಇವರಿಗೆ ಗೌರವ ಇದೆಯಾ. ಸುಮ್ಮನಿರಬೇಕು ಎಂದು ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕ ಮುನಿರತ್ನಂದು ಒಂದ, ಎರಡ? ನೋಡುತ್ತೀರಿ ಇನ್ನೂ ಹೊರಗಡೆ ಬರುತ್ತವೆ.ಮುನಿರತ್ನ ಸಂಪರ್ಕಕ್ಕೆ ಬಂದಿದ್ದವರು ಎಚ್‌ಐವಿ ಟೆಸ್ಟ್ ಮಾಡಿಸಬೇಕೆಂಬ ಹೇಳಿಕೆ ವಿಚಾರವಾಗಿ ಕೃಷ್ಣಭೈರೇಗೌಡ ಅವರು ಹೇಳಿದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ನಾನು ದೇಶದ ಪ್ರಧಾನಿ ಮೋದಿ ಡಿಎನ್‌ಎ ಚೆಕ್ ಮಾಡಿ ಎಂದು ಹೇಳಿದ್ದೇನೆ. ಬಿಜೆಪಿಯವರು ಹೆಚ್ಚಾಗಿ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಾಶಪ್ಪನವರು ತಿಳಿಸಿದರು.