ಮೊಳಕಾಲ್ಮುರು: ತಾಲೂಕಿನ ಬಿಜಿ ಕೆರೆಯ ಎಸ್ ಸಿ ಕಾಲೋನಿಯಲ್ಲಿ ನೀರೇ ಬಿಡುವುದಿಲ್ಲ ಹಣ ಕೊಟ್ಟರೆ ಮಾತ್ರ ನೀರು ಬಿಡುತ್ತಾರೆ ಎಂದು ಇಲ್ಲಿನ ಸಾರ್ವಜನಿಕರು ಅಳಲನ್ನು ತೋಡಿಕೊಂಡರು.
ಬಿಜಿಕೆರೆ ಪಂಚಾಯಿತಿಗೆ ಹೆಣ್ಣು ಮಕ್ಕಳು ಕೊಡಗಳನ್ನು ತಂದು ಪ್ರತಿಭಟನೆ ಮಾಡಿದರು.ಎಲೆಕ್ಷನ್ ಇದ್ದಾಗ ಮಾತ್ರ ಸ್ವಲ್ಪ ದಿನ ನೀರು ಬಿಟ್ಟು ಎಲೆಕ್ಷನ್ ಮುಗಿದ ನಂತರ ನಮ್ಮನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಇಲ್ಲಿನ ಮಹಿಳೆಯರು ಚುನಾವಣೆ ಪ್ರತಿನಿಧಿಗಳು ಬಿಜಿಕೆರೆ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು.
ಈ ಕಾಲೋನಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ಇರುವುದರಿಂದ ಬೆಳಿಗ್ಗೆ ಹೋದರೆ ಮತ್ತೆ ಸಾಯಂಕಾಲನೆ ಮನೆಗೆ ಬರುವುದು ಕುಡಿಯಲು ನೀರು ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.
ನಾವು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಕೂಡ ಗಮನಕ್ಕೆ ತಂದಿದ್ದೇವೆ ಯಾರು ಕೂಡ ಗಮನ ಹರಿಸುವುದಿಲ್ಲ .ನಮಗೆ ಈ ತಕ್ಷಣ ನೀರು ಬಿಡದಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೀರು ಬಿಸಿಲಿನಲ್ಲಿ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಇನ್ನಾದರೂ ಜನಪ್ರತಿನಿಧಿಗಳು ಪಂಚಾಯತಿ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ ಇಲ್ಲವೋ ಕಾದುನೋಡಬೇಕಿದೆ
ವರದಿ ಪಿಎಂ ಗಂಗಾಧರ