ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಬಸ್ಸಿನ ಸಮಸ್ಯೆ ಬಹಳಷ್ಟು ಇದೆ ಕಲ್ಬುರ್ಗಿಯಿಂದ ಬರುವಂತ ಪ್ರಯಾಣಿಕರಿಗೆ ಬೆಳಗ್ಗೆ 8:00ಗೆ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರಸ್ಥರು ಚಿಂಚೋಳಿ ತಾಲೂಕಿಗೆ ಬರಬೇಕಾದರೆ ಎರಡು ಬಸ್ಸಿನ ಜನರು ಒಂದೇ ಬಸ್ಸಿನಲ್ಲಿ ಬಂದಿರುವಂತಹ ಘಟನೆ ನಾವು ನೋಡುತ್ತೇವೆ ಅನೇಕ ಪ್ರಯಾಣಿಕರು ಅವರ ಗೂಡು ಕೇಳುವರು ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ ಸಂಬಂಧ ಪಟ್ಟ ಜಿಲ್ಲಾ ಘಟಕ ಮೇಲ್ವಿಚಾರಕರು ಮತ್ತೊಂದು ಬಸ್ಸಿನ ವ್ಯವಸ್ಥೆ ಮಾಡಬೇಕು ಬಸ್ಸು ಉಚಿತವಾಗಿ ಬರುವುದರಿಂದ ಕೆಲವೊಂದು ಬಸ್ಸುಗಳು ತಡೆರಹಿತ ಬಸ್ಸುಗಳಾಗಿ ಓಡಾಡಿಸುತ್ತಿದ್ದೀರಿ ಅದಕ್ಕಾಗಿ ಮಧ್ಯದಲ್ಲಿ ಹೋಗಿ ಬರಲು ಬಸ್ಸಿನ ಸಮಸ್ಯೆ ಇರುವುದರಿಂದ ಕಲ್ಬುರ್ಗಿಯಿಂದ ಚಿಂಚೋಳಿಗೆ ಬರುವವರೆಗೆ ಬಸ್ಸಿನ ಸಮಸ್ಯೆ ಕಂಡು ಬರುತ್ತದೆ ಅದಕ್ಕಾಗಿ ಬಸ್ಸು ಮತ್ತಷ್ಟು ಹೆಚ್ಚು ಮಾಡಿ ಓಡಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿಗಳ ಬಸ್ ಎಂದು ಘೋಷಣೆ ಮಾಡಿ.
ಚಿಂಚೋಳಿ ಯಿಂದ ಸುಲೇಪೇಟ್ ವರೆಗೆ ವಿದ್ಯಾರ್ಥಿಗಳ ಸಲುವಾಗಿಯೇ ಬಸ್ಸು ನಿಗದಿ ಮಾಡಿ ಓಡಿಸಬೇಕು ಆ ಬಸ್ಸಿನಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಹೋಗಬೇಕು ಇದರಿಂದ ವಿದ್ಯಾರ್ಥಿಗಳಿಗೆ ಕೂಡ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ ಬೆಳಗ್ಗೆ ಎಂಟು ಗಂಟೆಗೆ ಚಿಂಚೋಳಿ ಯಿಂದ ಬಿಡಬೇಕು ಸುಲೇಪೆಟ್ ಬಂದು ನಿಲ್ಲಿಸಿ ನಂತರ ಚಿಂಚೋಳಿ ಹೋಗಬೇಕು ಸಾಯಂಕಾಲ ನಾಲ್ಕು ಗಂಟೆಯಿಂದ 5 ಗಂಟೆವರೆಗೆ ಶಾಲೆ ಬಿಡುತ್ತೆ ಅವಾಗ ವಿದ್ಯಾರ್ಥಿಗಳ ಬಸ್ಸಿನಲ್ಲಿ ವಿದ್ಯಾರ್ಥಿಗಳು ಮಾತ್ರ ಹೋಗುತ್ತಾರೆ ಅದು ವಿಶೇಷವಾಗಿ ಬಸ್ಸು ಓಡಿಸುವಂತ ವ್ಯವಸ್ಥೆ ತಾಲೂಕು ಘಟಕ ಮೇಲ್ವಿಚಾರಕರು ಮಾಡಬೇಕೆಂದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದ್ದು ಹಾಗೂ ಸಾರ್ವಜನಿಕರ ಅಭಿಪ್ರಾಯ ಕೂಡ ಆಗಿದೆ ಹೀಗೆ ವಿದ್ಯಾರ್ಥಿಗಳ ಸಲುವಾಗಿಯೇ ಬಸ್ಸಿನ ವ್ಯವಸ್ಥೆ ಮಾಡಿದ್ದರೆ ಪ್ರಯಾಣಿಕರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಪ್ರಯಾಣಿಕರು ಹೇಳುತ್ತಿದ್ದಾರೆ.
ವರದಿ : ಸುನಿಲ್ ಸಲಗರ




