Ad imageAd image

ನಾನು ಸತ್ತರೆ ನಿನ್ನ ನೋಡಿಕೊಳ್ಳುವವರು ಯಾರೆಂದು ಪತ್ನಿ ಹತ್ಯೆಗೈದ ಪತಿ 

Bharath Vaibhav
ನಾನು ಸತ್ತರೆ ನಿನ್ನ ನೋಡಿಕೊಳ್ಳುವವರು ಯಾರೆಂದು ಪತ್ನಿ ಹತ್ಯೆಗೈದ ಪತಿ 
WhatsApp Group Join Now
Telegram Group Join Now

ಬೆಂಗಳೂರು: ತಾನು ಸಾವನ್ನಪ್ಪಿದರೇ ಪತ್ನಿಯನ್ನು ನೋಡಿಕೊಳ್ಳಲು ಸಂಬಂಧಿಕರೇ ಇಲ್ಲವೆಂದು, ಉಸಿರುಗಟ್ಟಿಸಿ ವೃದ್ದ ಪತಿಯೊಬ್ಬ ಕೊಂದಿರುವಂತ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ.ಬೆಂಗಳೂರಿನ ಇಸ್ರೋ ನಿವೃತ್ತ ನೌಕರನಿಂದಲೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಲಾಗಿದೆ.

ಬೆಂಗಳೂರಿನ ಅವಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಿರ್ಟುಸೋ ಅಪಾರ್ಮೆಂಟ್ ನಲ್ಲಿ ನೆಲೆಸಿದ್ದಂತ ವೃದ್ಧನೊಬ್ಬ ಈ ಕೃತ್ಯ ಎಸಗಿದ್ದಾನೆ.

ಪತ್ನಿ ಸಂಧ್ಯಾ ಎಂಬುವರನ್ನು ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್ ಎಂಬುವರು ಹತ್ಯೆಗೈದಿದ್ದಾರೆ. ನಾನು ಸತ್ತರೆ ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಗೆ ತಿಳಿದು ಬಂದಿದೆ.

ಮಾನಸಿಕ ಅಸ್ವಸ್ಥನಂತೆ ನಾಗಲೇಶ್ವರ ರಾವ್ ವರ್ತಿಸುತ್ತಿದ್ದಾರೆ. ನಾನು ಸತ್ತರೆ ನನ್ನ ಪತ್ನಿ ಯಾರು ನೋಡಿಕೊಳ್ಳುತ್ತಾರೆಂದು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೇ ಅವರ ಓರ್ವ ಮಗಳು ಅಮೇರಿಕಾದಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!