ಜೈಪುರ: ಪತಿ ಮನೆಗೆ ತಡವಾಗಿ ಮನೆಗೆ ಬಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪತ್ನಿಯ ಸಾವು ಸಹಿಸಿಕೊಳ್ಳಲಾಗದೆ ಪತಿ ಕೂಡ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಜೈಪುರದ ಹರ್ಮಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ದಂಪತಿಯನ್ನು ಮೋನಿಕಾ (35) ಹಾಗೂ ಘನಶ್ಯಾಮ್ ಬಂಕರ್ (38) ಎಂದು ಗುರುತಿಸಲಾಗಿದೆ.
ಕರ್ವಾ ಚೌತ್‌ನ ದಿನದಂದು ಪತಿ ಘನಶ್ಯಾಮ್ ಮನೆಗೆ ತಡವಾಗಿ ಬಂದಿದ್ದಾರೆ. ಹೀಗಾಗಿ ಪತ್ನಿ ಮೋನಿಕಾ ಪತಿಯೊಂದಿಗೆ ಜಗಳವಾಡಿದ್ದಾರೆ. ಆಗ ಅಲ್ಲಿಂದ ಹೊರ ಬಂದು ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನು ಕಂಡ ಸಾವು ಸಹಿಸಿಕೊಳ್ಳದ ಪತಿ ಕೂಡ ಪತ್ನಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ಘನಶ್ಯಾಮ್ ಕೆಲಸ ಮಾಡುತ್ತಿದ್ದರು. ಅವರು ಕರ್ವಾ ಚೌತ್‌ನ ದಿನ ಮನೆಗೆ ತಡವಾಗಿ ಬಂದಿದ್ದರು. ಇದು ಅವರ ಮತ್ತು ಅವರ ಪತ್ನಿ ನಡುವೆ ಜಗಳವಾಗಿದೆ. ಹೀಗಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.