ಹೊಸ ವರ್ಷದಂದೆ ಕ್ಷುಲ್ಲಕ ಕಾರಣಕ್ಕೆ ಮರ್ಡರ್ :ವಶಕ್ಕೆ
ಹುಬ್ಬಳ್ಳಿ: ಹೊಸ ವರ್ಷದ ಮೊದಲ ದಿನದಂದೇ ಪತಿಯೇ ಹೆಂಡತಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಇಲ್ಲಿನ ನ್ಯೂ ಆನಂದ ನಗರದಲ್ಲಿ ನಡೆದಿದೆ.
ಅಂಜುಮ್ (೩೨) ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಪತಿ ಮೆಹಬೂಬ ಫಣಿಬಂದ ಇಂದು ಬೆಳೆಗ್ಗೆ ಮನೆಯ ಬೆಡ್ ರೂಮನಲ್ಲಿ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಸಾಯಿಸಿದ್ದು, ಮೃತ ಮಹಿಳೆ ಮೆಹಬೂಬನಿಗೆ ಎರಡನೇ ಪತ್ನಿ ಎನ್ನಲಾಗಿದೆ.
ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮೆಹಬೂಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಹಣ ತರಲು ಹೆಂಡತಿ ಕಿರುಕುಳ ನೀಡುತ್ತಿದ್ದರಿಂದ ತಾನು ಕೊಲೆ ಮಾಡಿರುವುದಾಗಿ ಪತಿ ಹೇಳುತ್ತಿದ್ದಾನೆನ್ನಲಾಗಿದೆ.
ವರದಿ:ಸುಧೀರ್ ಕುಲಕರ್ಣಿ




