ಸೇಡಂ:- ತಾಲೂಕಿನ ಕಾಗಿನ ಮತ್ತು ಕಮಲಾವತಿ ನದಿಗಳ ಒಡಲಿನಲ್ಲಿ ಅಡಗಿರುವ ಚಿನ್ನದ ಬೆಲೆಬಾಳುವ ಮರಳನ್ನು ಹಗಳು ರಾತ್ರಿ ಎನ್ನದೆ ಅಕ್ರಮ ಮರಳು ದಂಧೆಕೋರರು ದೋಚುತಿದ್ದಾರೆ.
ತಾಲೂಕಿನ ಕಾಗಿಣಾ ಮತ್ತು ಕಮಲಾವತಿ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಹಗಲು ರಾತ್ರಿ ಎನ್ನದೆ ಸುಮಾರು ಹತ್ತರಿಂದ ಇಪ್ಪತ್ತು ಫಿಟ್ ಆಳ ಮರಳು ತೆಗೆಯುವಂತಹ ಬೃಹತ್ ಗಾತ್ರದ ಜೆಸಿಬಿಗಳು ದಿನನಿತ್ಯ ಬೃಹತ್ ಗಾತ್ರದ ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ಮರಳು ತುಂಬಿ ಕಲಿಸುತ್ತವೆ ಆಯಾ ಮರಳು ಎಲ್ಲಿಗೆ ಹೋಗುತ್ತದೆ ಎಂಬುದು ತಾಲೂಕ ಆಡಳಿತವು ಪತ್ತೆ ಹಚ್ಚಬೇಕಿದೆ.?ಇದೇ ನವೆಂಬರ್ 16ರಂದು ಸಂಜೆವಾಣಿ ಪತ್ರಿಕೆಯಲ್ಲಿ ಈ ಕುರಿತು ವಿಶೇಷ ವರದಿ ಆಗಿತ್ತು.
ವರದಿಗೆ ಸ್ಪಂದಿಸಿ ತಾಲೂಕಾಡಲಿತವು ಎಚ್ಚೆತ್ತುಕೊಂಡು ಅಕ್ರಮ ಮರಳು ತಡೆಗೆ 13/11/24ರಂದು ಸಂಭಪಟ್ಟ ಪೊಲೀಸ್, ಆರ್,ಟಿ,ಓ, ಆದಾಯ, ಗ್ರಾಮ ಪಂಚಾಯತ್, ಪಿಡಬ್ಲ್ಯೂಡಿ, ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಟಾಸ್ಕ್ ಫೋರ್ಸ್ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ. ಈ ವಾರದಲ್ಲಿ ಸಭೆ ಕರೆದು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವುದಾಗಿ ಸಹಾಯಕ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಕೆ,ಎ,ಎಸ್ ಅವರು ಸ್ಪಷ್ಟನೆ ನೀಡಿದ್ದಾರೆ.ಆದರೆ ಈ ಸಭೆ ಮುಂದೂಡಿಕೆಗೆ ಕಾರಣಗಳೇನು ಏನು ಅಂತ ವಿವರಣೆ ಮಾತ್ರ ನೀಡಿಲ್ಲ.
ತಾಲೂಕಿನಲ್ಲಿ ಇದೆ ರೀತಿಯ ಅನೇಕ ಹಳ್ಳಿಗಳಲ್ಲಿ. ಕೆರೆ, ಹಳ್ಳ, ನದಿಗಳು ಸೇರಿದಂತೆ ಇದೆ ರೀತಿಯ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವರ ಎಂಬುದು ಕಾದು ನೋಡಬೇಕಿದೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.