ಬ್ರೀಡಿ (ಐರ್ಲೆಂಡ್): ಇಲ್ಲಿನ ಬ್ರೀಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಾಳೆ ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳ ನಡುವೆ ಎರಡನೇ ಟ್ವೆಂಟಿ- 20 ಕ್ರಿಕೆಟ್ ಪಂದ್ಯ ನಡೆಯಲಿದೆ. ಮೊದಲ ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯಗಳಿಸಿತ್ತು.
ಇಂಗ್ಲೆಂಡ್ ಪ್ರವಾಸದ ನಂತರ ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದು, ಮೂರನೇ ಟ್ವೆಂಟಿ- ಪಂದ್ಯವನ್ನು 15 ರಂದು ಆಡಲಿದೆ.




