ಸೇಂಟ್ ಜಾರ್ಜ ಗ್ರೇಂಡಾ ( ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾ ತನ್ನ ದ್ವಿತೀಯ ಸರದಿಯಲ್ಲಿ 7 ವಿಕೆಟ್ ಗೆ 227 ರನ್ ಗಳಿಸಿದ್ದು, ಒಟ್ಟಾರೆ 254 ರನ್ ಗಳ ಮುನ್ನಡೆ ಪಡೆದಿದೆ.
ಅಲೆಕ್ಸ್ ಕ್ಯಾರಿ 26 ಹಾಗೂ ಪ್ಯಾಟ್ ಕಮ್ಮಿನ್ಸ್ 4 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಟೆಸ್ಟ್ ಪಂದ್ಯದಲ್ಲಿ ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಪಂದ್ಯ ಕುತೂಹಲ ಕೆರಳಿಸಿದೆ. ಕಾಂಗರೂಗಳ ಪರವಾಗಿ ದ್ವಿತೀಯ ಸರದಿಯಲ್ಲಿ ಹಿರಿಯ ಬ್ಯಾಟ್ಸಮನ್ ಸ್ಟೀವನ್ ಸ್ಮಿತ್ 71 ರನ್ ಗಳಿಸಿದರು.




