—————————————————————————————-ಪಂದ್ಯ ಶ್ರೇಷ್ಠ: ಜೋಶ್ ಇಂಗ್ಲೀಷ್
ಜಮೈಕಾ ( ವೆಸ್ಟ್ ಇಂಡೀಸ್) ಇಲ್ಲಿನ ಸಬೀನಾ ಪಾರ್ಕ್ ಕಿಂಗ್ಸಟನ್ ಮೈದಾನದಲ್ಲಿ ನಿನ್ನೆ ತಡರಾತ್ರಿ ಮುಗಿದ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗಳಿಂದ ಗೆದ್ದು ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿತು.
ಸ್ಕೋರ್ ವಿವರ:
ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 8 ವಿಕೆಟ್ ಗೆ 172
ಬ್ರೆಂಡನ್ ಕಿಂಗ್ 51 ( 36 ಎಸೆತ, 3 ಬೌಂಡರಿ, 1 ಸಿಕ್ಸರ್ ), ರಸಲ್ 36 ( 15 ಎಸೆತ, 2 ಬೌಂಡರಿ, 4 ಸಿಕ್ಸರ್)
ಆಡಮ್ ಜಂಪಾ 29 ಕ್ಕೆ 3, ಮ್ಯಾಕ್ಸವೆಲ್ 15 ಕ್ಕೆ 2
ಆಸ್ಟ್ರೇಲಿಯಾ 15.2 ಓವರುಗಳಲ್ಲಿ 2 ವಿಕೆಟ್ ಗೆ 173
ಜೋಶ್ ಇಂಗ್ಲೀಷ್ 78 ( 33 ಎಸೆತ, 7 ಬೌಂಡರಿ, 5 ಸಿಕ್ಸರ್ ) ಕ್ಯಾಮರೂನ್ ಗ್ರೀನ್ 56 ( 32 ಎಸೆತ, 3 ಬೌಂಡರಿ, 4 ಸಿಕ್ಸರ್)
ಜೇಸನ್ ಹೋಲ್ಡರ್ 28 ಕ್ಕೆ 1




