ಬ್ರೀಡಿ (ಉತ್ತರ ಐರ್ಲೆಂಡ್): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆತಿಥೇಯ ಐರ್ಲೆಂಡ್ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 62 ರನ್ ಗಳಿಂದ ಜಯಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 256 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಐರ್ಲೆಂಡ್ 7 ವಿಕೆಟ್ ಗೆ 194 ರನ್ ಗಳಿಸಿತು.
ಸ್ಕೋರ್ ವಿವರ:
ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 5 ವಿಕೆಟ್ ಗೆ 256
ಲೆವಿಸ್ 91 ( 44 ಎಸೆತ, 7 ಬೌಂಡರಿ, 1 ಸಿಕ್ಸರ್ ), ಸಾಯಿ ಹೋಪ್ 51 ( 27 ಎಸೆತ, 4 ಬೌಂಡರಿ, 4 ಸಿಕ್ಸರ್)
ಕಾರ್ಟಿ 49 ( 22 ಎಸೆತ, 4 ಬೌಂಡರಿ, 4 ಸಿಕ್ಸರ್) ಮ್ಯಾಥ್ಯೂ ಹಂಪ್ರೆಸ್ 16 ಕ್ಕೆ 2)
ಐರ್ಲೆಂಡ್ 20 ಓವರುಗಳಲ್ಲಿ 7 ವಿಕೆಟ್ ಗೆ 194
ರೋಸ್ ಅದೈರ್ 48 ( 36 ಎಸೆತ, 3 ಬೌಂಡರಿ, 4 ಸಿಕ್ಸರ್), ಮಾರ್ಕ ಅದೈರ್ 31 ( 14 ಎಸೆತ, 4 ಬೌಂಡರಿ)
ಅಕೀಲ್ ಹುಸೇನ್ 27 ಕ್ಕೆ 3




