ದೆಹಲಿ: ಇಲ್ಲಿನ ಅರುಣ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಮೊದಲ ಸೂಪರ್ ಓವರ್ ಗೆ ಸಾಕ್ಷಿಯಾಯಿತು. ಈ ಸೂಪರ್ ಓವರ್ ರೋಚಕದಲ್ಲಿಗೆದ್ದ ದೆಹಲಿ ಕ್ಯಾಪಿಟಲ್ಸ್ 10 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಯಿತು.
ನಿಗದಿತ 20 ಓವರುಗಳಲ್ಲಿ ಎರಡೂ ತಂಡಗಳು 188 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ಫಲಿತಾಂಶಕ್ಕಾಗಿ ಸೂಪರ್ ಮೊರೆ ಹೋಗಲಾಯಿತು. ಇದರಲ್ಲಿ ಮೊದಲ ಒಂದು ಓವರಿನ ಆಟದಲ್ಲಿ ರಾಜಸ್ತಾನ ರಾಯಲ್ಸ್ 11 ರನ್ ಗಳನ್ನು ಗಳಿಸಿತು. ಜಯ ಸಾಧಿಸಲು 12 ರನ್ ಗಳಿಸಬೇಕಿದ್ದ ದೆಹಲಿ ಕ್ಯಾಪಿಟಲ್ಸ್ ತಂಡವು ಇನ್ನು 2 ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದಿತು.
ಆರ್.ಆರ್. ಉತ್ತಮ ಆರಂಭ: ಸೂಪ್ ಓವರಿನಲ್ಲಿ ಮೊದಲ ಮೂರು ಎಸೆತಗಳಲ್ಲಿ 10 ರನ್ ಗಳಿಸಿದ್ದ ರಾಜಸ್ತಾನ ರಾಯಲ್ಸ್ ಉತ್ತಮ ಆರಂಭ ಮಾಡಿತ್ತು. ನಂತರ ಮಿಚೆಲ್ ಸ್ಟಾರ್ಕ್ ಅವರ ಸ್ಲೂವ್ ಯಾರ್ಕ್ ಗಳು ಪಂದ್ಯದ ಗತಿಯನ್ನು ಬದಲಿಸಿದವು. ನಂತರ ಮೂರು ಎಸೆತಗಳಲ್ಲಿ ಆರ್. ಆರ್. ಮೂರು ರನ್ ಔಟ್ ಗಳನ್ನು ಕಂಡಿತು. ಇದು ಸ್ಟಾರ್ಕ್ ಅವರ ಅತ್ಯುತ್ತಮ ಯಾರ್ಕರ್ ಪರಿಣಾಮ. ನಂತರ ದೆಹಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ 12 ರನ್ ಗಳಿಸಿ ಪಂದ್ಯ ಗೆದ್ದಿತು.
ಸ್ಕೋರ್ ವಿವರ:
ದೆಹಲಿ ಕ್ಯಾಪಿಟಲ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 188
ಅಭಿಷೇಕ ಪೊರೆಲ್ 49( 37 ಎಸೆತ, 5 ಬೌಂಡರಿ, 1 ಸಿಕ್ಸರ್), ಕೆ.ಎಲ್. ರಾಹುಲ್ 38 ( 32 ಎಸೆತ, 2 ಬೌಂಡರಿ, 2 ಸಿಕ್ಸರ್)
ಸ್ಟಬ್ಸ್ 34 ( 18 ಎಸೆತ, 2 ಬೌಂಡರಿ, 2 ಸಿಕ್ಸರ್), ಅಕ್ಸರ್ ಪಟೇಲ್ 34 ( 14 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಪ್ರಾ ಆರ್ಚರ್ 32 ಕ್ಕೆ2)
ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 4 ವಿಕೆಟ್ ಗೆ 188
ನಿತೀಶ ರಾಣಾ 51 ( 28 ಎಸೆತ, 6 ಬೌಂಡರಿ, 2 ಸಿಕ್ಸರ್), ಯಶಸ್ವಿ ಜೈಸ್ವಾಲ್ 51 ( 37 ಎಸೆತ, 3 ಬೌಂಡರಿ, 4 ಸಿಕ್ಸರ್), ಸಂಜು ಸ್ಯಾಮ್ಸನ್ 31 ( 19 ಎಸೆತ, 2 ಬೌಂಡರಿ, 3 ಸಿಕ್ಸರ್) ಅಕ್ಷರ ಪಟೇಲ್ 23 ಕ್ಕೆ 1.
ಸೂಪರ್ ಓವರ್; ರಾಜಸ್ತಾನ್ ರಾಯಲ್ಸ್ 1 ಓವರಿನಲ್ಲಿ 11
ದೆಹಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ 12
ಪಂದ್ಯ ಶ್ರೇಷ್ಠ: ಮಿಚೆಲ್ ಸ್ಟಾರ್ಕ್