Ad imageAd image

ಪ್ರಕಾಶ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಧರ್ಮನಗರಿ ಶಮನೆವಾಡಿಯಲ್ಲಿ ರಸ್ತೆ ಕಾಮಗಾರಿಗಾಗಿ 1 ಕೋಟಿ 47 ಲಕ್ಷ ರೂಪಾಯಿ ಮಂಜೂರು ಕಾಮಗಾರಿಗೆ ಚಾಲನೆ

Bharath Vaibhav
ಪ್ರಕಾಶ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ ಧರ್ಮನಗರಿ ಶಮನೆವಾಡಿಯಲ್ಲಿ ರಸ್ತೆ ಕಾಮಗಾರಿಗಾಗಿ 1 ಕೋಟಿ 47 ಲಕ್ಷ ರೂಪಾಯಿ ಮಂಜೂರು ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now

ಚಿಕ್ಕೋಡಿ :ತಾಲೂಕಿನ ಧರ್ಮನಗರಿ ಶಮನೆ ವಾಡಿಯ ಅಭಿವೃದ್ಧಿಗಾಗಿ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಕೊಡುಗೆ ಅಪಾರವಾಗಿದ್ದು , ಈ ಹೊತ್ತು ರಾಜ್ಯ ರಾಷ್ಟ್ರೀಯ ಹೆದ್ದಾರಿ ಅನುದಾನದಲ್ಲಿ ಶಮನೆವಾಡಿ ಬಸ್ ನಿಲ್ದಾಣದಿಂದ ಶಾಂತಿನಗರ ಸರ್ಕಲ್ ವರೆಗೆ 1200 ಮೀಟರ್ ಹಾಗೂ ಸದಲಗಾ ರಸ್ತೆಯಲ್ಲಿರುವ ರುದ್ರ ಭೂಮಿಯಿಂದ ಬಂಡಗರ ತೋಟದವರೆಗಿನ 1650 ಮೀಟರ್ ಹೀಗೆ ಒಟ್ಟು 2.850 ಕಿಲೋ ಮೀಟರ್ ರಸ್ತೆ ಡಾಂಬರೀಕರಣಕ್ಕಾಗಿ 1 ಕೋಟಿ 47 ಲಕ್ಷ ರೂಪಾಯಿ ಮಂಜೂ ರಾಗಿದ್ದು ಸದಲಗಾ ಅರ್ಬನ್ ಬ್ಯಾಂಕಿನ ಮಾಜಿ ನಿರ್ದೇಶಕ ಉದಯ ಖೋತ ಅವರ ಹಸ್ತದಿಂದ ಜೆ ಸಿ ಬಿ ಯಂತ್ರ ಪೂಜೆಯೊಂದಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೈ ಜಿನೇಂದ್ರ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಖೋತ ಸುರೇಶ್ ಖೋತ, ಆರ್ ಬಿ ಖೋತ, ಅಶೋಕ ಪಾಟೀಲ ಪುನೀತ ಚೌಗಲೆ ಸಚಿನ್ ಖೋತ ಬಾಬಾ ಸಾಬ ಹನಿಮನಾಳೆ ಅವರ ಹಸ್ತದಿಂದ ಶ್ರೀ ಫಲ ಅರ್ಪಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅಜಿತ್ ಪಾರಿಸ ಖೋತ ಶಾಂತಿನಾಥ ಕುಠೋಳೆ, ಬಾಳಾಸಾಹೇಬ ಶಿವಣ್ಣನವರ ಸುಭಾಷ ಶಿರಗುಪ್ಪೆ ಉದಯ ತಪಕಿರೇ ಇಂದ್ರಜಿತ್ ವಾಗಮೊಡೆ ಉಮೇಶ್ ವಾಗಮೋಡೆ ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು

 

ಮಹಾವೀರ ಚಿಂಚನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!