ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಚಾಮರಾಜನಗರ ಜಿಲ್ಲಾ ಪೋಲೀಸ್, ಕೊಳ್ಳೇಗಾಲ ಉಪವಿಭಾಗ ಯಳಂದೂರು ವೃತ್ತ, ಯಳಂದೂರು ಪೋಲೀಸ್ ಠಾಣೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನ ಸಂಪರ್ಕ ಸಭೆಯನ್ನು ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.
ದಲಿತರಿಗೆ ಮತ್ತು ನಾಯಕ ಸಮುದಾಯದವರಿಗೆ ಸ್ಮಶಾನ ಇಲ್ಲ ದಯವಿಟ್ಟು ಅದರ ಬಗ್ಗೆ ತಹಶಿಲ್ದಾರಿಗೆ ತಿಳಿಸಿ.ಇಲ್ಲವಾದರೆ ಶವವನ್ನು ತಾಲ್ಲೂಕು ಕಛೇರಿ ಮುಂದೆ ಇರಿಸಿ ಪ್ರತಿಭಟನೆಮಾಡಲಾಗುತ್ತದೆ ಎಂದು ರಾಜೇಶ್ ತಿಳಿಸಿದರು.
ಅಂಬೇಡ್ಕರ್ಸಂಘದ ಅಧ್ಯಕ್ಷ ಸಚಿನ್ ಬಿ ಮಾತನಾಡಿ, ಗ್ರಾಮಕ್ಕೆ ಬೀಟ್ ಪೋಲೀಸ್ ಬರುತ್ತಿಲ್ಲ, ಒತ್ತುವರಿ,ಕುಡಿಯುವ ನೀರು ಅನೈರ್ಮಲ್ಯ, ಸುಚ್ಚಿತ್ವ, ಗ್ರಾಮದಲ್ಲಿರುವ ಪ್ರೌಢಶಾಲೆ ತೆರಳುವ ಹೆಣ್ಣುಮಕ್ಕಳಿಗೆ ಪಡ್ಡೆ ಹುಡುಗರು ಕಿರುಕಿಳ ನೀಡುತ್ತಿದ್ದಾರೆ ಎಂದು ಅಂಬೇಡ್ಕರ್ ಅಧ್ಯಕ್ಷ ಸಚಿನ್ ಬಿ ದೂರಿದರು.
ಮೈಕ್ರೋ ಫೈನಾನ್ಸ್ ನವರ ಹಾವಳಿ ಜಾಸ್ತಿಯಾಗಿ ಕಿರುಕಿಳ ನೀಡುತ್ತಿದ್ದಾರೆ. ಮನೆಯ ಮುಂದೆನೆ ಕೂತು ಹಣ ಕಟ್ಟಬೇಕು ಅಂತ ಹಿಂಸೆ ಮಾಡುತ್ತಿದ್ದಾರೆ ಎಂದು ಜಯಮ್ಮ ದೂರಿದರು.
ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ ಕುಡಿದ ಅಮಲಿನಲ್ಲಿ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ಬೀದಿಯಲ್ಲಿ ತಿರುಗಾಡುತ್ತಾರೆ ಹಾಗೂ ಮಹಿಳೆಯರನ್ನು ಆಶ್ಲೀಲವಾಗಿ ಬೈಯುತ್ತಾರೆ ಎಂದು ಸಿದ್ದನಾಗಮ್ಮ ದೂರಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಬಾಗಿದೆ ಇದರಿಂದ ಯುವ ಪೀಳಿಗೆ ಚಟಕ್ಕೆ ಬಲಿಯಾಗಿದ್ದಾರೆ ಇದಕ್ಕೆ ಕಡಿವಾಣ ಹಾಕಬಿ ಎಂದು ನವೀನ್ ಎಸ್ ತಿಳಿಸಿದರು.
ಹೋಟೆಲ್ ಗಳಲ್ಲಿ ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಬಳಿಸಿ ಅದರ ಮೇಲೆ ಇಡ್ಲಿ ಹಿಟ್ಟು ಹಾಕಿ ಬೇಯಿಸುತ್ತಿದ್ದಾರೆ ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಿರಣ್ ಜೆ. ತಿಳಿಸಿದರು.
ಕೆಸ್ತೂರು ಗ್ರಾಮವು ತಾಲ್ಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದೆ ಹೆಚ್ಚು ದಲಿತರು ಇರುವಂತ ಗ್ರಾಮವೂಕೂಡವಾಗಿದೆ ಆದರೆ ಇಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಗ್ರಾಮದ ಕೆಲ ಹೋಟೇಲ್ ಗಳಲ್ಲಿ ದಲಿತರಿಗೆ ಮತ್ತು ಹಿಂದುಳಿದವರ್ಗದವರಿಗೆ ಪ್ಲಾಸ್ಟಿಕ್ ತಟ್ಟೆ ಲೋಟದಲ್ಲಿ ತಿಂಡಿ ನೀಡಿದರೆ ಉನ್ನತ ಜಾತಿಯವರಿಗೆ ಸ್ಟೀಲ್ ತಟ್ಟೆ ಲೋಟದಲ್ಲಿ ತಿಂಡಿನೀಡುತ್ತಾರೆಂದು ಗ್ರಾಮಸ್ಥರು ದೂರಿದರು.
ಯುವಕರು ಕುಡಿತ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬಾರ್ ಗಳಲ್ಲಿ ಯುವಕರಿಗೆ ಮದ್ಯ ಕೊಡಬಾರದು .
ಇನ್ನೂ ಅನೇಕ ವಿಷಯಗಳ ಬಗ್ಗೆ ದೂರಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಮಾತನಾಡಿ ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಯಾವುದೇ ಸಮಸ್ಯೆಗಳಿದ್ದರು 112 ಗೂ ಕರೆ ಮಾಡಿ, ಆಪ್ತ ಗೆಳತಿ ಬಾಕ್ಸ್ ಗಳನ್ನು ಶಾಲೆ ಕಾಲೇಜುಗಳಲ್ಲಿ ಇರಿಸಲಾಗಿದೆ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಇರಿಸಲಾಗಿದೆ. ಪೋಲೀಸ್ ಮತ್ತು ಸಾರ್ವಜನಿಕರ ನಡುವೆ ಒಳ್ಳೆಯ ಅಭಿಪ್ರಾಯವಿರಬೇಕು. ನಿಮ್ಮೇಲ್ಲರ ಹಿತವೇ ಪೋಲೀಸ್ ಇಲಾಖೆಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಆಕಾಶ್, ಯಜಮಾನರಾದ ಬಿ ನಾಗರಾಜು, ಕುಮಾರ್, ದೊರೆಸ್ವಾಮಿ, ಜಯರಾಜು,ನಾಗನಾಯಕ್, ಮುಖಂಡರಾದ ಸಿದ್ದರಾಜು, ನಾಗಣ್ಣ, ಈರನಾಯಕ, ಚಿನ್ನಸ್ವಾಮಿನಾಯಕ,ವೀರಭದ್ರನಾಯಕ, ಪರಮೇಶ್,ಮಹೇಶ್, ನವೀನ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಚಿನ್, ಕಿರಣ್ ಕೆ, ರಾಜೇಶ್, ಚಿನ್ನಸ್ವಾಮಿ, ರಾಜು,
ಹಾಗೂ ಮಹಿಳೆಯರು ಗ್ರಾಮಸ್ಥರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ