ಸೇಡಂ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದಿನಾಂಕ 27/04/2025 ರಂದು ಮುಂಜಾನೆ ಕೆಲಸ ಮಾಡುವ ಸಮಯದಲ್ಲಿ ರಾಮುಲಮ್ಮ ಗಂಡ ಹಣಮಂತು ನಾಡೆಪಲ್ಲಿ ವಯಸ್ಸು 46 ಸೇಡಂ ತಾಲೂಕಿನ ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಮ ಕೆರೆಯ ಬಲ ಭಾಗದ ಕಾಲವೇ ಕೆಲಸ ಮಾಡುತ್ತಿರುವ ಸಮಯದಲ್ಲಿ ಕುಸಿದು ಬಿದ್ದು ಮರಣ ಹೊಂದಿದ್ದಾರೆ.
ಕೆಲಸದ ಸಮಯದಲ್ಲಿ ಮಹಿಳೆ ಮರಣ ಹೊಂದಿರುವುದರಿಂದ ಕುಟುಂಬವು ಅನಾಥ ಆಗಿದೆ ಎಂದು ಸ್ಥಳೀಯರು ವ್ಯಕ್ತಪಡಿಸಿದರು. ಮೃತಳ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್