ಕೋಲಾರ: ವಿವಾಹಿತೆಯನ್ನು ಪ್ರೀತಿಸಿ ಮದುವೆಯಾಗೋದಾಗಿ ನಂಬಿಸಿ ತನ್ನಿಂದ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ನಿರಾಕರಿಸಿದ್ದರಿಂದ ಇದೀಗ ಮಹಿಳೆ ಆತನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಪ್ರಿಯಕರ ಅಮರನಾಥ್ ಮನೆ ಮುಂದೆ ಸಂಯುಕ್ತಾ ಧರಣಿ ನಡೆಸುತ್ತಿದ್ದಾಳೆ. ಸಂಯುಕ್ತಾ ಪತಿ ಹರೀಶ್ ಸ್ನೇಹಿತ ಈ ಅಮರನಾಥ್.
ಬೆಂಗಳೂರಲ್ಲಿ ಅಮರನಾಥ್ ಹಾಗೂ ಸಂಯುಕ್ತಾ ಪ್ರೀತಿ ಮೊಳಕೆಯೊಡೆದಿದ್ದು, ಕಳೆದ 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಮರನಾಥ್ ಗಾಗಿ ಸಂಯುಕ್ತಾ ತನ್ನ ಪತಿ ಹರೀಶ್ ನನ್ನೇ ಬಿಟ್ಟು ಬಂದಿದ್ದಳು. ಇದೀಗ ಸಂಯುಕ್ತಾ 5 ತಿಂಗಳ ಗರ್ಭಿಣಿಯಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಅಮರನಾಥ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.
ಅಮರನಾಥ್ ಮದುವೆಯಾಗಲು ನಿರಾಕರಿಸುತ್ತಿರುವುದರಿಂದ ನೊಂದ ಸಂಯುಕ್ತಾ ತನ್ನನ್ನು ಮದುವೆ ಮಾಡಿಕೊಳ್ಳುಂತೆ ಆಗ್ರಹಿಸಿ ಕೋಲಾರದ ಶ್ರೀನಿವಾಸಪುರದಲ್ಲಿರುವಂತ ಅಮರನಾಥ್ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ.




