ಇಳಕಲ್ಲ: ಇಲ್ಲಿನ ಆಯುರ್ವೇದಿಕ ಕಾಲೇಜಿನ ಸಭಾಂಗಣದಲ್ಲಿ ಮಹಿಳಾ ಕ್ರಿಯಾ ಯೋಗ ಸಮೂಹ ಇಳಕಲ್ ವತಿಯಿಂದ ಮಹಿಳಾ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರಾರಂಭದಲ್ಲಿ ಓಂಕಾರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದಲ್ಲಿ ಎಲ್ಲ ಮಹಿಳಾ ಸಂಘಟನೆಗಳು ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರಿಗೆ ಗೌರವಿಸಿ ಸತ್ಕರಿಸಲಾಯಿತು. ಮಹಿಳೆಯರು ಇವತ್ತಿನ ಸಮಾಜದಲ್ಲಿ ಎಲ್ಲಾ ಸ್ಥಾನದಲ್ಲೂ ಸ್ಪರ್ಧೆ ಮಾಡುತ್ತಾ ಗುರಿ ಸಾಧನೆಗಾಗಿ ಪುರುಷರಿಗೆ ಸರಿ ಸಮಾನವಾಗಿ ದುಡಿದು ಜಗತ್ತಿಗೆ ಮಾದರಿಯಾಗಿದ್ದಾರೆ. ಹಾಗಾಗಿ ಮಹಿಳೆ ನಾಲ್ಕು ಗೋಡೆಗಳ ಮಧ್ಯ ಅಡುಗೆ ಮನೆಯನಿಂದ ಹೊರ ಬಂದು ಸಾಮಾಜಿಕ ಸೇವೆ ಮಾಡುವುದರ ಜೊತೆಗೆ ಗಂಡನಿಗೆ ಹೆಂಡತಿಯಾಗಿ ಅತ್ತೆಗೆ ಸೊಸೆಯಾಗಿ ಮಕ್ಕಳಿಗೆ ತಾಯಿಯಾಗಿ ಮಹಿಳೆ ಎಲ್ಲ ರಂಗದಲ್ಲೂ ತನ್ನದೇ ಆದ ಚಾಪು ಮೂಡಿ ಸುತ್ತ ಸಮಾಜದಲ್ಲಿ ಪುರುಷರಿಗಿಂತ ಹೆಚ್ಚು ಕೆಲಸ ಮಾಡುವ ಶಕ್ತಿ ಇರುವುದು ಕೇವಲ ಮಹಿಳೆಯರಿಗೆ ಮಾತ್ರ ಎಂದು ಹೇಳಿದರು ಡಾ. ಅರುಣ ಅಕ್ಕಿ ಹೇಳಿದರು ಕಾರ್ಯಕ್ರಮದ ಯೋಗ ಗುರುಗಳು ಡಾ|| ಶ್ರೀಮತಿ ಶೋಭಾ ನಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ ರಾಜೇಶ್ವರಿ ಸಂಕಿನ ಡಾ ರಶ್ಮೀ ಧರಕ ವಹಿಸಿದ್ದರು.
ಕಾರ್ಯಕ್ರಮದ ಅತಿಥಿಗಳ ಪರಿಚಯವನ್ನು ಇಂದುಮತಿ ಪುರಾಣಿಕಮಠ,ನಿರೂಪಣೆ ಶ್ವೇತಾ ತೆಂಗಿನಮಠ, ವಂದನಾರ್ಪಣೆ ಸುಜಾತ ಸಾಲಿಮಠನೆರವೇರಿಸಿದರು.
ಮಹಿಳೆಯರು ಮನೆ ಬೆಳಗುವ ಜ್ಯೋತಿಯಾಗಬೇಕು: ಡಾ ಅರುಣಾ ಅಕ್ಕಿ
