—————————–ಇಲಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ
ರಾಯಚೂರು: ಜಿಲ್ಲೆ ಲಿಂಗಸಗೂರು ತಾಲೂಕ್ ಬೆಂಡೋಣಿ ಗ್ರಾಮದ ಮಹಿಳೆ ಮಂಜುಳ ನಗಿಮುಖ, ಹಲವಾರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ನೇರವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ನೇರವಾಗಿ ಮಾತನಾಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ತಮ್ಮ ಗ್ರಾಮ ಬೆಂಡೋಣಿ ಯಿಂದ ಕಂದಗಲ್ಲ ಕುಷ್ಟಗಿ ಮಾರ್ಗವಾಗಿ ಉಡುಪಿ ತಲುಪಿ ಅಲ್ಲಿ ಶ್ರೀ ಕ್ರಷ್ಣಮಂದಿರದ ದೇವಾಲಯದ ಆವರಣದಲ್ಲಿ ಮೋದಿಜಿಯವರನ್ನು ಭೇಟಿಯಾಗಲೆಂದು ಅಂದಾಜು 462 ಕಿ ಮೀ ನೆಡೆಯುತ್ತಿದ್ದಾಳೆ.
ಅತ್ಯಾಚಾರಿಗಳಿಂದ ಮತ್ತು ಲವ್ ಜಿಹಾದದಿಂದ್ ಮುಕ್ತಿ, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿ, ಹಾಗೂ ಸ್ಪೋಕನ್ ಇಂಗ್ಲೀಷಗೆ ಆದ್ಯತೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಪ್ರಧಾನ ಮಂತ್ರಿಗಳು ಶಕ್ತಿಯಾಗಿ ನಿಲ್ಲಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಪಾದಯಾತ್ರೆ ಕೈಗೊಂಡಿರುವ ಈ ಮಹಿಳೆಯ ಸಾಹಸ ಮೆಚ್ಚುವಂತಹದು.
ಕಂದಗಲ್ಲ ಗ್ರಾಮದಲ್ಲಿ ಈ ಮಹಿಳೆ ಪಾದಯಾತ್ರೆ ಹೋಗುವದನ್ನು ಕಂಡ ಗ್ರಾಮದ ಹಿತಚಿಂತಕ್ ಸಂಗಣ್ಣ ಹವಾಲ್ದಾರ್ ಈ ಮಹಿಳೆಯ ಕೆಲಸ ಮೆಚ್ಚಿ ತಮ್ಮ್ ಸಂಸ್ಥೆ ವಿಶ್ವ ಚೇತನ ಪಬ್ಲಿಕ್ ಶಾಲೆಯ ಗುರುಮಹಾಂತ ರಂಗಮಂದಿರದಲ್ಲಿ ಸನ್ಮಾನಿಸಿ ಧೈರ್ಯ ತುಂಬಿ ಬೀಳ್ಕೊಟ್ಟರು.ಶಾಲೆಯ ಎಲ್ಲ ಗುರುಗಳು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ದಾವಲ್ ಶೇಡಂ




