ಸಿಂಧನೂರು : ಮಾರ್ಚ್ 8ರಂದು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಸೆಲ್ವಿ ತಮಿಳುನಾಡು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಾರಂಭ ಮಾಡಿದ್ದೆ ಸೋವಿಯತ್ ರಷ್ಯಾಯಾದ ಮಹಿಳೆಯರು ರಷ್ಯಾದ ಮೇಲೆ ಸಾಮ್ರಾಜ್ಯ ಶಾಹಿಗಳಿಂದ ನಡೆಯುತ್ತಿದ್ದ ಯುದ್ಧದಲ್ಲಿ ಅತ್ಯಂತ ಬಲಿ ಪಶುಗಳಾಗಿದ್ದ ಮಹಿಳೆಯರು ಹಾಗೂ ಮಕ್ಕಳು ಸೇರಿಕೊಂಡು ಯುದ್ಧ ಬೇಡ ಹೊಟ್ಟೆಗೆ ರೊಟ್ಟಿ ಬೇಕು ನಮಗೆ ಶಾಂತಿ ಬೇಕು ಎಂದು ಒಗ್ಗೂಡಿ ಯುದ್ಧದ ವಿರುದ್ಧ ಎದ್ದು ನಿಂತರು ಅಂದಿನಿಂದ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪದ್ಧತಿ ಜಗತ್ತಿನಾದ್ಯಂತ ಜಾರಿಗೆ ಬಂತು ಎಂದರು.
ನಂತರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಮ್ರೆಡ್ ರುಕ್ಮಿಣಿ ಗೆಜ್ಜಲಗಟ್ಟಿ ಮಾತನಾಡಿ ಭಾರತ ಸ್ವಾತಂತ್ರ್ಯ ಚಳುವಳಿಕೆ ಮಹಿಳಾ ಸಮುದಾಯದ ಕೊಡುಗೆ ಅಪಾರವಾಗಿದೆ ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲೆ ದಾಳಿ ಮಿತಿಮೀರಿ ಹೋಗಿದೆ ಕಾರಣ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗ ಬೇಕಾಗಿದೆ ದುಡಿಯೋ ಮಹಿಳೆಯರ ಮುಖಂಡತ್ವದಲ್ಲಿ ಇತರ ಶೋಷಿತ ಸಮುದಾಯದೊಂದಿಗೆ ಸೇರಿಕೊಂಡು ಸಮಾನತೆ ಸ್ವಾತಂತ್ರ ಹಾಗೂ ಶೋಷಣೆ ಇಲ್ಲದ ಸಮಾಜಕ್ಕಾಗಿ ಹೋರಾಡಬೇಕಾಗಿದೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ – ವಿಜಯರಾಣಿ ಅಧ್ಯಕ್ಷರು ಎಂಎಂಎಸ್ ಸಂಘಟನೆ, ಕಾಮ್ರೆಡ್ ಶಿವಮ್ಮ ವೀರಪುರ, ವಿರೂಪಮ್ಮ ಗ್ರಾಕೋ ಸ್. ಕಾಮ್ರೆಡ್ ದೇವಮ್ಮ ಈಚನಾಳ. ಕಾಮ್ರೇಡ್ ನಸ್ರಾನ ಬೇಗಂ. ಕಾಮ್ರೆಡ್ ತುಳಸಮ್ಮ. ಗದ್ಯಮ್ಮ. ಮಹಾನಂದ ಸಿಂಧನೂರು ಕಾಂಬ್ರೆಡ್ ಎಂಡಿ. ಅಮೀರ್ ಅಲಿ ಎಂ. ಗಂಗಾಧರ್ ಇದ್ದರು
ಬಸವರಾಜ ಬುಕ್ಕನಹಟ್ಟಿ, ಸಿಂಧನೂರು
ಎಪಿಎಂಸಿ ಸಮುದಾಯ ಭವನದಲ್ಲಿ ಮಹಿಳಾ ದಿನಾಚರಣೆ




