Ad imageAd image

ಸಾರಿಗೆ ಸಂಸ್ಥೆ ಬಾದಾಮಿ ಘಟಕದಲ್ಲಿ ಮಹಿಳಾ ದಿನಾಚರಣೆ

Bharath Vaibhav
ಸಾರಿಗೆ ಸಂಸ್ಥೆ ಬಾದಾಮಿ ಘಟಕದಲ್ಲಿ ಮಹಿಳಾ ದಿನಾಚರಣೆ
WhatsApp Group Join Now
Telegram Group Join Now

ಬಾದಾಮಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗ ಬಾದಾಮಿ ಘಟಕದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕ ವ್ಯವಸ್ಥಾಪಕರಾದ ಎ. ಎ.ಕೋರಿ ಅವರು ಸಂಸ್ಥೆಯ ಕುರಿತು ಶಕ್ತಿ ಯೋಜನೆಯ ಕುರಿತು ಅನೇಕ ವಿಷಯಗಳನ್ನು ಕಾರ್ಮಿಕರಿಗೆ ತಿಳಿಸಿದರು. ಈ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಕ್ಕಮಹಾದೇವಿ ಜನಾಲಿ ಎಸ್. ಎಸ್. ಬಿ. ಎಮ್ ಪದವಿ ಕಾಲೇಜ್ ಬಾದಾಮಿ ಇವರು ಮಹಿಳಾ ದಿನಾಚರಣೆಯ ಹಿನ್ನೆಲೆ ಕುರಿತು ಮಾತನಾಡಿದರು ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಜಯಶ್ರೀ ಆಲೂರು ಶಿಕ್ಷಕಿಯರು ಸರ್ಕಾರಿ ಪ್ರೌಢಶಾಲೆ ಮುತ್ತಲಗೆರಿ ಇವರು ಶಿಕ್ಷಣದ ಕುರಿತು ಸಾವಿತ್ರಿಬಾಯಿ ಪುಲೆಯವರ ಸಾಧನೆಯ ಅನೇಕ ವಿಚಾರಗಳನ್ನು ವಿವರಿಸಿದರು. ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಪಾರ್ವತಿ ಲಂಕೆನ್ನವರ ಉಪನ್ಯಾಸಕರು ಎಸ್. ಜಿ. ಎಮ್ ಕೆ ಪಿಯು ಕಾಲೇಜ್ ಬಾದಾಮಿ ಇವರು ಮಹಿಳೆಯ ಸಬಲೀಕರಣದ ಕುರಿತು ಅನೇಕ ವಿಷಯಗಳನ್ನು ಮಹಿಳೆಯರಿಗೆ ಮನಮುಟ್ಟು ಹಾಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಘಟಕದಲ್ಲಿರುವ ಎಲ್ಲಾ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು ಮತ್ತು ಉಪಸ್ಥಿತರಿದ್ದ ಅತಿಥಿಗಳನ್ನ ಸನ್ಮಾನಿಸಿ ಬೀಳ್ಕೊಡಲಾಯಿತು.

ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!