ಚಾಮರಾಜನಗರ: ಯಳಂದೂರು ಪಟ್ಟಣದ ವಾಲ್ಮೀಕಿ ಸುಮುದಾಯ ಭವನದಲ್ಲಿ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಹಾಗೂ ಬೆಲ್ ಸ್ಟಾರ್ ಮೈಗ್ರೋ ಫೈನಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಮಾಡಲಾಯಿತು.
ಯಳಂದೂರು ಪೊಲೀಸ್ ಠಾಣಾ ಪಿ ಎಸ್ ಐ ತಾಜ್ ಉದ್ದಿನ್ ಗಿಡಕೆ ನೀರು ಹಾಕುವುದರಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ನೆರೆವೇರಿಸಿದರು.
ಮಹಿಳೆಯರಿಗೆ ಹಿಂದಿನ ಕಾಲಘಟ್ಟದಲ್ಲಿ ಯಾವದೇರೀತಿಯ ಹಕ್ಕುಗಳು ಇರಲ್ಲಿ ಸಂವಿಧಾನ ಜಾರಿಯಾದ ನಂತರ ರಾಜಕೀಯ ಹಕ್ಕುಗಳು ಶಿಕ್ಷಣದಲ್ಲಿ ಹಕ್ಕು, ಮತದಾನದಲ್ಲಿ ಹಕ್ಕು, ಕೆಲಸದಲ್ಲಿ ಸಮಾನತೆ ಇತರ ಹಲವರು ಹಕ್ಕುಗಳನ್ನು ಮಹಿಳೆಯರು ಪಡೆಯುತ್ತಿದರೆ ಇದಕೆಲ್ಲಾ ಅಂಬೇಡ್ಕರ್ ಕಾರಣ ಅವರನ್ನ ನಾವು ನೆನೆಯಬೇಕು ಮಹಿಳೆಯರು ಯಾರಿಗೂ ಕಮ್ಮಿ ಇಲ್ಲಾ ಎಂದು ನಾವು ಎಲ್ಲಾ ರಂಗದಲ್ಲೂ ನೋಡುತಿದ್ದೇವೆ ಎಂದು ಉದ್ಘಾಟನೆ ನುಡಿಗಳನ್ನು ತಾಜ್ ಉದ್ದಿನ್ ರವರು ನುಡಿದರು.
ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಜಿಲ್ಲಾ ಪ್ರಾಜೆಕ್ಟ್ ಹೆಡ್ ಮಹದೇವಸ್ವಾಮಿ ಎನ್ ಮಾತನಾಡಿ ಹೆಣ್ಣು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣು ದೇಶದ ಕಣ್ಣು ಮಹಿಳೆಯರು ಎಲ್ಲರಂಗದ್ಲಲೂ ಮುಂದ್ದೆ ಇದ್ದಾರೆ ಇವರ ಆಚರಣೆಯನ್ನು ಮಾಡುತ್ತಿರುವುದು ಖುಷಿ ತಂದಿದ್ದೆ ಎಂದು ತಿಳಿಸಿದರು.ಕೆಲವು ಸಾಧಕ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು,
ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಜಿಲ್ಲಾ ಕೋ ಆಪರೇಟರ್ ಮಹದೇವಸ್ವಾಮಿ, ವಸಂತ, ಆರ್ ಎಂ ಧನಜಯ್, ಸೆಂದಿಲ್ ಕುಮಾರ್ ಜೆಡ್ ಹೆಚ್, ಎ ಓ ಸುರೇಖಾ,ಎನ್ ಆರ್ ಎಲ್ ಎಂ ಆರ್ಥಿಕ ಹಣಕಾಸು ಸಲಹೆ ಶಿವಶಂಕರ ಸಂಯೋಜಕರಾದ ಸಿದ್ದರಾಜು, ಬ್ಲಾಕ್ ಟ್ರೈನರ್ ಪುಷ್ಪಲತಾ, ರಾಜೇಶ್ವರಿ ಬಟ್, ರಮೇಶ್, ಧನಜಯ್, ರವಳಪ್ಪ, ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ