ಬೀದರ: ತಾಲೂಕಿನ ಚೌಳಿ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆತಲ್ ಬೆಸ್ಟೆಸ್ ಚರ್ಚನ (ಫಾದರ್)ರವರಾದ ರಾಜ್ ಕುಮಾರ್ ರವರು ಮತ್ತು ಬೀದರ್ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಧರ್ಮೇಂದ್ರ ಸರ್, ಒಕ್ಕೂಟ್ ಪದಾಧಿಕಾರಿಗಳಾದ ,ನಿರ್ಮಲಾ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿಯೊಂದು ಭಾಗಕ್ಕೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯ ಮುಖಾಂತರ ಶಿಕ್ಷಣ, ಆರೋಗ್ಯ & ನೈರ್ಮಲ್ಯ, ಸರಕಾರಿ ಯೋಜನೆಗಳು ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದು, ಸುಜ್ಞಾನನಿಧಿ ಶಿಷ್ಯವೇತನ, ಪ್ರತಿಯೊಂದು ಮನೆ ಮನೆಗೆ ತಲುಪಿದೆ ವಿಶೇಷವಾಗಿ ಸಂಪನ್ಮೂಲವನ್ನು ಗುರುತಿಸಿಕೊಂಡು ಮಾಹಿತಿ ನೀಡಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಶೃತಿ ಕಲಾತಂಡದವರು ನಾಟಕ ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಸ್ವಚ್ಛತೆ, ಶೌಚಾಲಯ ಬಳಕೆ, ಮಧ್ಯವರ್ಜನ ಶಿಬಿರ, ಬಾಲ್ಯ ವಿವಾಹ, ಸುಜ್ಞಾನ ನಿಧಿ ಶಿಷ್ಯವೇತನ ಹೇಗೆ ಪಡೆದುಕೊಳ್ಳಬೇಕು ಸದುಪಯೋಗ ಮಾಡಿಕೊಳ್ಳುವುದನ್ನು ತಿಳಿಸಿಕೊಟ್ಟರು. ವಲಯದ ಮೇಲ್ವಿಚಾರಕರಾದ ಸರಸ್ವತಿ ಸೇವಾ ಪ್ರತಿನಿಧಿಗಳಾದ ಪವಿತ್ರ ಜ್ಯೋತಿ ಸಂಘದ ಸದಸ್ಯರು ಗಣ್ಯರು ಉಪಸ್ಥಿತರಿದ್ದರು.
ವರದಿ:ಸಂತೋಷ್ ಬಿಜಿ ಪಾಟೀಲ್