ಬೆಳಗಾವಿ : ಮಾಲೀಕನ ವಿರುದ್ಧ ಕಾರ್ಮಿಕನೊಬ್ಬ ವಿಚಿತ್ರವಾಗಿ ಪ್ರತಿಭಟಿಸಿದ್ದು ಕ್ಷಣ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಂಜುನಾಥ ಬಸಪ್ಪ ಮಡೊಳ್ಳಿ ಎಂಬ ವ್ಯಕ್ತಿ ತನ್ನ ಮಾಲೀಕ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಬ್ಯಾನರ್ ಕಂಬ ಏರಿ ಕಾರ್ಮಿಕ ಪ್ರತಿಭಟನೆ ಮಾಡಿರುವ ಘಟನೆ ಬೈಲಹೊಂಗಲದಲ್ಲಿ ನಡೆದಿದೆ.
ಬೈಲಹೊಂಗಲದ ಸಂಗಮ್ ಹೋಟೆಲ್ನಲ್ಲಿ ಮಂಜುನಾಥ ಕೆಲಸ ಮಾಡುತ್ತಿದ್ದರು. ಆದ್ರೆ ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಮಾಲೀಕ ಚಂದ್ರಶೇಖರ್ ಶೆಟ್ಟಿ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಬೇಸರಗೊಂಡ ಕಾರ್ಮಿಕ ಇದೇ ಹೋಟೆಲ್ ಎದುರಿಗೆ ಇದ್ದ ಬ್ಯಾನರ್ ಕಂಬ ಏರಿ ಕುಳಿತಿದ್ದಾರೆ.
ಈ ಘಟನೆಯನ್ನು ಕಂಡು ಕೆಲಕಾಲ ಜನ ಅಲ್ಲಿಯೇ ನೋಡುತ್ತಾ ನಿಂತುಬಿಟ್ಟಿದ್ದರು. ಈ ವೇಳೆ ಅಲ್ಲೇ ಇದ್ದ ಆಟೋ ಚಾಲಕ ಬ್ಯಾನರ್ ಕಂಬ ಏರಿ ಕಾರ್ಮಿಕನನ್ನ ಕಾಪಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.