ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಚಿಂಚೋಳಿಯಲ್ಲಿ ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಬಸ್ಸು ನಿಲ್ದಾಣದ ಎದುರುಗಡೆ ನೂರಾರು ಕಾರ್ಮಿಕರ ಸೇರಿಕೊಂಡು ಪ್ರತಿಭಟನೆ ಮಾಡಲಾಯಿತು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ರಾಜ್ಯದಾದಂತ ರೈತರ ಕಾರ್ಮಿಕರ ಬೇಡಿಕೆಗಳಿಗಾಗಿ ಚಿಂಚೋಳಿಯಲ್ಲಿ ಪ್ರತಿಭಟನೆ ನಡೆಯಲಾಯಿತು ಈ ಪ್ರತಿಭಟನೆಯನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಭೀಮಶೆಟ್ಟಿ ಎಂಪಾಳಿ ತಿಳಿಸಿದ್ದಾರೆ.
ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಅದೇ ರೀತಿಯಾಗಿ ಡಾ. ಸ್ವಾಮಿನಾಥನ ಆಯೋಗದ ವರದಿ ಪ್ರಕಾರ ರೈತರಿಗೆ ಸೌಲಭ್ಯ ನೀಡಬೇಕು ಅಷ್ಟೇ ಕಬ್ಬಿಗೆ ನಿಗದಿತ ಬೆಲೆ ನಿರ್ಧರಿಸಬೇಕು ಮಕ್ಕಳಿಗೆ ಪೋಸ್ಟಿಕ ಅಂಶದ ಆಹಾರ ನೀಡಬೇಕು ಅಷ್ಟೇ ಅಲ್ಲ ವಸತಿ ನಿಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ದಾರರಿಗೆ ಹೆಚ್ಚಿನ ಸಂಬಳ ನೀಡಬೇಕು ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡಬೇಕು.
ಅಂಗನವಾಡಿ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡಬೇಕು ರೈತರ ಸಾಲ ಮನ್ನ ಮಾಡಬೇಕು ಕಾರ್ಮಿಕರನ್ನು ಗುಲಾಮರಾಗಿ ನೋಡದನೆ, ನಿಗದಿತ ಸಮಯದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಸರ್ಕಾರದ ಜಾಗದಲ್ಲಿ ಮನೆ ಕಟ್ಟಿದವರಿಗೆ ಸಕ್ರಮ ಮಾಡಿ ನೀಡಬೇಕು ಯಾರು ಭೂಮಿ ಉಳುಮೆಮಾಡುತ್ತಾರೋ ಅವರಿಗೆ ಹಕ್ಕುಪತ್ರ ನೀಡಬೇಕು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಆಗಿರುವಂತ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ರೈತ ಸಂಘಟನೆ ವತಿಯಿಂದ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ವರದಿ: ಸುನಿಲ್ ಸಲಗರ