ರಾಮದುರ್ಗ:ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ಕಟ್ಟಡ ಕಾರ್ಮಿಕರ ಟೂಲ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕರಾದ ಅಶೋಕ ಪಟ್ಟಣ, ನಿಜವಾದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸೌಲಭ್ಯಗಳು ಸಿಗಬೇಕು. ಪ್ರಾಮಾಣಿಕವಾಗಿ ನಿಜವಾಗಿಯೂ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಸರಕಾರದ ಯೋಜನೆಗಳು ಲಭ್ಯವಾಗಬೇಕು. ಆದ್ದರಿಂದ ಬೋಗಸ್ ಕಾರ್ಡುಗಳು ರದ್ದಾಗಬೇಕೆಂದು ಅಧಿಕಾರಿಗಳಿಗೆ ಕವಿ ಮಾತು ಹೇಳಿದರು.

ಬೇರೆಯವರಿಗೆ ನೆರಳನ್ನು ಮಾಡಿಕೊಡುವ ಅಂದರೆ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ನಿಜವಾದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯಗಳು ತ್ವರಿತವಾಗಿ ಸಿಗುವ ನಿಟ್ಟಿನಲ್ಲಿ ಕಾರ್ಮಿಕ `ಇಲಾಖೆಯವರು ಕ್ರಮವಹಿಸಬೇಕೆಂದು ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಿಗೆ ಕಾರ್ಮಿಕ ಇಲಾಖೆಯ ಅಧಿಕಾರಿ ಹಾಗೂ ಕಾರ್ಮಿಕ ಮುಖಂಡರು ಕೂಡಿ ಸನ್ಮಾನ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಪ್ರಕಾಶ ಹೊಳೆಪ್ಪನವರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪೂರ, ಕಾರ್ಮಿಕ ಇಲಾಖೆ ಅಧಿಕಾರಿಯಾದ ನಾಗರಾಜ ಮಧು, ಹಾಗೂ ಕಾರ್ಮಿಕ ಮುಖಂಡರಾದ ಪ್ರಶಾಂತ ಕಲಾದಗಿ, ಗಣೇಶ ದೊಡಮನಿ, ಮತ್ತು ರಮೇಶ ಬಂಡಿವಡ್ಡರ, ಇನ್ನು ಹಲವಾರು ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುನಾಥ ಕಲಾದಗಿ




