Ad imageAd image

ವಿಶ್ವ ಸುಲಭ ಲಭ್ಯತಾ ಅರಿವು ದಿನಾಚರಣೆ”

Bharath Vaibhav
ವಿಶ್ವ ಸುಲಭ ಲಭ್ಯತಾ ಅರಿವು ದಿನಾಚರಣೆ”
WhatsApp Group Join Now
Telegram Group Join Now

ಮುದಗಲ್ಲ :- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಾಯಚೂರು ಜಿಲ್ಲೆ. ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ( ಎಪಿಡಿ) ಕಾಯ೯ನೀತಿ ಮತ್ತು ವಕಾಲತಿ ವಿಭಾಗ ಬೆಂಗಳೂರು. ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ ಲಿಂಗಸುಗೂರು ಕನಾ೯ಟಕ ಅಕ್ಸೆಸಬಿಲಿಟಿ ಟಾಸ್ಕ್ ಪೋಸ೯ ಮತ್ತು ಕನಾ೯ಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿ ರಾಯಚೂರು ಇವರುಗಳ ಜಂಟಿ ಸಹಯೋಗದಲ್ಲಿ ಮುದಗಲ್ ಪಟ್ಟಣದ ಎ. ಪಿ. ಎಮ್. ಸಿ. ಕಾಮಿ೯ಕರ ಭವನದಲ್ಲಿ ಇಂದು ನಡೆದ “ವಿಶ್ವ ಸುಲಭ ಲಭ್ಯತಾ ಅರಿವು ದಿನಾಚರಣೆ” ಕಾಯ೯ಕ್ರಮದ ಅಧ್ಯಕ್ಷತೆಯನ್ನು ಲಿಂಗಸುಗೂರು ತಾಲೂಕು ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿಗಳಾದ ಶ್ರೀ ಅಮರೇಶ ಯಾದವ್ ರವರು ವಹಿಸಿ ಕೊಂಡಿದ್ದರು.

ಕಾಯ೯ಕ್ರಮದ ಕುರಿತು ಪ್ರಾಸ್ತಾವಿಕವಾಗಿ ಕನಾ೯ಟಕ ಅಕ್ಸೆಸಬಿಲಿಟಿ ಟಾಸ್ಕ್ ಪೋಸ೯ ಮತ್ತು ಕನಾ೯ಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಸುರೇಶ ಭಂಡಾರಿಯವರು ದೇಶದಲ್ಲಿನ ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಾದ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದಡಿ ಸರ್ಕಾರಗಳು ಜನರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಎಲ್ಲರೂ ಒಂದೇ ಭಾವನೆ ಹೊಂದಬೇಕು’ ಎಂದು ತಿಳಿಸಿದರು.

ಕಾಯ೯ಕ್ರಮದಲ್ಲಿ ಲಿಂಗಸುಗೂರು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳಾದ ಶ್ರೀ ಗೋಕುಲಸಾಬ. ವಿಕಲಚೇತನರ ತಾಲೂಕ ನೋಡೆಲ್ ಅಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಮುದಗಲ್ ಉಪ ತಹಶೀಲ್ದಾರರಾದ ಶ್ರೀ ತುಳಜಾರಾಮ್ ಸಿಂಗ್ ಮುದಗಲ್ ಪುರಸಭೆ ಸಂಘಟನಾಧಿಕಾರಿಗಳಾದ ಚೆನ್ನಮ್ಮ ದಳವಾಯಿ ಲಿಂಗಸುಗೂರು ವಿವಿದೋದ್ದೇಶ ಕಾಯ೯ಕತ೯ರಾದ ಶ್ರೀ ನಾಗರಾಜ್ ಚೇತನ ಸಂಸ್ಥೆಯ ಅಧ್ಯಕ್ಷರಾದ ಹುಸೇನಬಾಷಾ, ಅಸ್ಕಿಹಾಳ ನಾಗರಾಜ್, ಅಮರೇಶ ಪಾಟೀಲ್ ,ವೀರುಪಾಕ್ಷಯ್ಯ ಹೊಸಮಠ ಹಾಗೂ ವಿಕಲಚೇತನರು ಹಾಗೂ ಪೋಷಕರು ಭಾಗವಹಿಸಿದ್ದರು,

ವರದಿ:-ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!