* 14 ವರ್ಷದೊಳಗಿನ ಮಕ್ಕಳ ದುಡಿಮೆ ಸಂಪೂರ್ಣ ನಿಷೇಧ: : ನ್ಯಾಯಾಧೀಶರು ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ
ಲಿಂಗಸ್ಗೂರು : ಇಂದು ಲಿಂಗಸುಗೂರು ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ, ಲಿಂಗಸುಗೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮಾನ್ಯ ಗೌರವಾನ್ವಿತ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಪ್ರಮಾಣ ವಚನ ಭೋಧಿಸಿ ಚಾಲನೆಯನ್ನು ನೀಡಿ, 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ 15-18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ 2 ವರ್ಷ ಜೈಲು & ರೂ. 50,000/- ದಂಡ. ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಶ್ರೀ ಅಂಬಣ್ಣ .ಕೆ . ಪ್ರಧಾನ ಸಿವಿಲ್ ನ್ಯಾಯಾಧೀಶರು ಲಿಂಗಸುಗೂರು. ಮುಖ್ಯ ಅತಿಥಿಗಾಳಾಗಿ ಭಾಗವಹಿಸಿದ್ದರು. ಹಾಗೂ ಶ್ರೀ ವಿರುಪಣ್ಣ ದುಮತಿ, ಸಹಾಯಕ ಸರಕಾರಿ ಅಭಿಯೋಜಕರು ಲಿಂಗಸುಗೂರು. ಶ್ರೀ ಬಾಲರಾಜ ಸಾಗರ ಕಾರ್ಯದರ್ಶಿಗಳು, ತಾಲೂಕು ವಕೀಲರ ಸಂಘ, ಲಿಂಗಸುಗೂರು. ಶ್ರೀ ಬಸವರಾಜ ಜಳಿಕಿ ಮಠ ಗ್ರೇಡ್ -2 ತಹಶಿಲ್ದಾರರು ಲಿಂಗಸುಗೂರು. ಶ್ರೀ ಪುಂಡಲಿಕ್ ಪಟ್ಟಾತರ ಪೋಲಿಸ್ ನೀರಿಕ್ಷರು ಲಿಂಗಸುಗೂರು. ಶ್ರೀ ಹನುಮಂತ ಕುಳಿಗೇರಿ ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿಗಳು ಲಿಂಗಸುಗೂರು.. ಶ್ರೀ ಗೋಕುಲ್ ಹುಸೇನ್ ಸಿ.ಡಿ.ಪಿ.ಓ, ಲಿಂಗಸುಗೂರು. ಶ್ರೀ ಶಾಂತಮೂರ್ತಿ ಕಾರ್ಮಿಕ ನೀರಿಕ್ಷರು ಲಿಂಗಸುಗೂರು. ಶ್ರೀ ಮೌನೇಶ ಸಿ.ಆರ್.ಪಿ. ಲಿಂಗಸುಗೂರು ನಗರ ಮತ್ತು ನ್ಯಾಯಾಲಯದ ಸಿಬ್ಬಂಧಿಗಳು, ನ್ಯಾಯಾವಾದಿಗಳು ನಗರದ ವಿವಿಧ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಭಾತ ಫೇರಿ ಜೊತೆಗೆ ಬಿತ್ತಿ ಪತ್ರಗಳು ಬಾಲಕಾರ್ಮಿಕ ಪದ್ದತಿ ಶಿಕ್ಷಾರ್ಹ ಅಪರಾದ 14ವರ್ಷದೊಳಗಿನ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ, ಓದು ಬರಹ ಕಲಿಸಿ ಬಾಲಕಾರ್ಮಿಕತೆ ಅಳಿಸಿ, ಎಂದು ಘೋಷಣೆ ಕೂಗುತ್ತಾ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಜಾಥ ಮಾಡುವದರ ಮೂಲಕ ಯಶಸ್ವಿಗೋಳಿಸಿದರು.
ವರದಿ : ಶ್ರೀನಿವಾಸ ಮಧುಶ್ರೀ




