Ad imageAd image

ವಿಶ್ವ ಅಂಗವಿಕಲರ, ಮಾನವ ಹಕ್ಕುಗಳ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ

Bharath Vaibhav
ವಿಶ್ವ ಅಂಗವಿಕಲರ, ಮಾನವ ಹಕ್ಕುಗಳ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ
WhatsApp Group Join Now
Telegram Group Join Now

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮಂಗಳವಾರ ಜರುಗಿತು.

ವಿಶ್ವ ಅಂಗವಿಕಲರ ದಿನಾಚರಣೆ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ನಿಮಿತ್ತ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಪ್ರಭಾರಿ ಸಿವಿಲ್ ನ್ಯಾಯಾಧೀಶರಾದ ಈರಪ್ಪ ಢವಳೇಶ್ವರ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಪ್ರತಿವರ್ಷ ಡಿಸೆಂಬರ್ 3ರಂದು ವಿಶ್ವ ಅಂಗವಿಲಕರ ದಿನಾಚರಣೆ, ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸುವ ಸರ್ಕಾರದ ಆದೇಶವಿದೆ.

ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಎಲ್ಲರೂ ತಮ್ಮ ಹಕ್ಕುಗಳ ಜೊತೆಗೆ ಇನ್ನಿತರರ ಹಕ್ಕುಗಳನ್ನು ಗೌರವಿಸಬೇಕಾಗಿದೆ.

ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲೆಂದು ಕಾನೂನು ಸೇವಾ ಸಮಿತಿಯಿಂದ ನಿಮಗೆಲ್ಲಾ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.

ಸರ್ಕಾರಿ ಸಹಾಯಕ ಅಭಿಯೋಕರಾದ ಶಿವರಾಜ ಅವರು ಮಾತನಾಡಿ ಗ್ರಾಹಕರಾದ ನಾವೆಲ್ಲಾ ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟದ ಬಗ್ಗೆ ಎಚ್ಚರವಹಿಸಿ ಕೊಂಡುಕೊಳ್ಳಬೇಕೆಂದರು.

ಪಿ.ಎಸ್.ಐ ತಾರಾಬಾಯಿ ಅವರು ಮಾತನಾಡಿ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವ ರೂಪಿಸಲು ಕಾನೂನು ಅರಿವು ಅಗತ್ಯವಾಗಿದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಕಾನೂನಿನ ಮಹತ್ವದ ಅರಿಯಬೇಕೆಂದರು.

ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಪದಾಧಿಕಾರಿಗಳಾದ ಎಮ್.ಜೆ.ಖಾದರಭಾಷ, ಅಬ್ದುಲ್ ಖಾದರ್ ಜಿಲಾನಿ, ಪ್ರಾಚಾರ್ಯರಾದ ಕೊಟ್ರ ಬಸಪ್ಪ, ಪ್ಯಾನಲ್ ವಕೀಲರಾದ ನೆಲಗುಂಟಯ್ಯ, ಮಲ್ಲಿಗೌಡ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!