Ad imageAd image

ಹಟ್ಟಿ ಪೋಲಿಸ್ ಠಾಣೆಯಲ್ಲಿ ಸಸಿ ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆ 

Bharath Vaibhav
ಹಟ್ಟಿ ಪೋಲಿಸ್ ಠಾಣೆಯಲ್ಲಿ ಸಸಿ ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆ 
WhatsApp Group Join Now
Telegram Group Join Now

ಲಿಂಗಸ್ಗೂರು : ವಿಶ್ವ ಪರಿಸರ ದಿನಾಚರಣೆ ಜೂನ್ ಐದರಂದು ಪ್ರಪಂಚದಾದ್ಯಂತ ಆಚರಿಸುತ್ತಾರೆ
1972ರಲ್ಲಿ ವಿಶ್ವಸಂಸ್ಥೆ ಈ ದಿನ ಘೋಷಿಸಿತ್ತು ಅದರಂತೆ 1974ರಲ್ಲಿ ಜೂನ್ 5 ರಂದು ಪ್ರಥಮ ಬಾರಿಗೆ ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಇಂದು ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಇಂಗ್ಲಿಷ್ ಮೇಡಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಹಟ್ಟಿ ಚಿನ್ನದ ಗಣಿ ಕಂಪನಿಗೆ ಭೇಟಿ ನೀಡಿ ಕಂಪನಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಸಸಿ ನೀಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು ವಿದ್ಯಾರ್ಥಿಯೊಂದಿಗೆ ಸಸಿ ತೆಗೆದುಕೊಂಡ ಪ್ರಧಾನ ವ್ಯವಸ್ಥಾಪಕರು ಸೈಫುಲ್ಲಾ ಖಾನ್, ಯಮನೂರಪ್ಪ, ಜಗನ್ ಮೋಹನ್, ಸುರೇಶ್ ಕಂಪನಿ ಅಧಿಕಾರಿಗಳು ನಂತರ ಮಾತಾಡಿದ ಚಿನ್ನದ ಗಣಿಯ ಪ್ರಧಾನ ವ್ಯವಸ್ಥಾಪಕರು ಸೈಫುಲ್ಲಾ ಖಾನ್ ಶಾಲೆಯಲ್ಲಿಯೂ ಪರಿಸರ ದಿನಾಚರಣೆ ಆಚರಿಸುತ್ತಿರುವುದು ನೋಡಿದರೆ ಮಕ್ಕಳಲ್ಲಿ ಈ ರೀತಿ ಬೆಳವಣಿಗೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸರ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು ಈ ರೀತಿ ಮಕ್ಕಳಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದರಿಂದ ಒಳ್ಳೆಯ ಬೆಳವಣಿಗೆ ಹಾಗೂ ವಿಶ್ವದಲ್ಲೆಡೆ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಮನ ಕುಲುಕುವ ಜೀವ ಸಂಕುಲಗಳ ಉಳಿಸುವುದೇ ಪ್ರಕೃತಿಯಿಂದ ಅಂತ ಪ್ರಕೃತಿ ಇಂದು ಹಾಳಾಗುತ್ತಿದೆ ಕಾಡು ಉಳಿಸಿದರೆ ನಾಡು ಎಂಬ ಸಂದೇಶ ಸರ್ವಕಾಲಕ್ಕೂ ಸತ್ಯವಾದದ್ದು ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರಾಗಿದ್ದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿನ್ನದ ಗಣಿ ಕಾರ್ಮಿಕರಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ವಿಶೇಷವಾಗಿ ಶ್ರೀ ವಿನಾಯಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವೇಷಭೂಷಣಗಳೊಂದಿಗೆ ಆಗಮಿಸಿದ್ದರು.

ನಂತರ ಹಟ್ಟಿ ಪೊಲೀಸ್ ಠಾಣೆಗೆ ಆಗಮಿಸಿದ ವಿದ್ಯಾರ್ಥಿಗಳು ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಜಲಗೇರಿ ಇವರಿಗೆ ಸಸಿ ನೀಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು.

ಮಕ್ಕಳೊಂದಿಗೆ ಸಸಿ ಸ್ವೀಕರಿಸಿದ ಪೊಲೀಸ್ ಇನ್ಸ್ಪೆಕ್ಟರ್ ನಂತರ ಮಾತನಾಡಿ ಪ್ರಕೃತಿಯನ್ನು ಉತ್ತಮ ರೀತಿಯಲ್ಲಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ದಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು
ನಂತರ ಪೊಲೀಸ್ ಠಾಣಾ ಆವರಣದಲ್ಲಿ ಸಸಿ ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದರು
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯಾದ ವಿಜಯ್, ಬಸವರಾಜ್, ಮಾರುತಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಇಂಗ್ಲಿಷ್ ಮೇಡಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸೇರಿ ವಿಭಿನ್ನ ರೀತಿಯಾಗಿ ವಿಶ್ವ ಪರಿಸರ ದಿನಾಚರಣೆಯ ಆಚರಿಸಿದರು ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರು ಕವಿತಾ ಆರ್ ಜಿ, ಶಿಕ್ಷಕರಾದ ಅಶೋಕ್, ಎಂ ಡಿ ನದೀಮ್, ಪ್ರೇಮಲತಾ, ಸ್ವಪ್ನ ಉಪಸಿತರಿದ್ದರು.

ವರದಿ : ಶ್ರೀನಿವಾಸ ಮಧುಶ್ರೀ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!