ಇಲಕಲ್:- ಹೊಸದಾಗಿ ಒಂದನೇ ತರಗತಿಗೆ ಶಾಲೆಗೆ ದಾಖಲಾದ ಮಕ್ಕಳಿಂದ ಸಸಿಗೆ ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಪಿ ಎಸ್ ಪಮ್ಮಾರ ,ಪ್ರತಿ ಮಕ್ಕಳು ಒಂದೊಂದು ಸಸಿ ಮನೆಯ ಮುಂದೆ ಹಾಗೂ ಶಾಲೆಯಲ್ಲಿ ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಾದ ಶ್ರೀಮತಿ ಜಿ ಕೆ ಮಠ,ಶ್ರೀ ಎ ಡಿ ಬಾಗವಾನ ,ಶ್ರೀಮತಿ ಪಿ ಎಸ್ ಹೊಸುರು ,ಶ್ರೀಮತಿ ಆರ್ ಎಸ್ ಕೊಡಗಲಿ ,ಶ್ರೀಮತಿ ಎಂ ಎನ್ ಅರಳಿಕಟ್ಟಿ ,ಶ್ರೀಮತಿ ಎಂ ಪಿ ಚೇಗೂರ ,ಶ್ರೀಮತಿ ಎಸ್ ಎಲ್ ಜೋಗಿನ ,ಶ್ರೀ ಎಂ ಎಸ್ ಬೀಳಗಿ ,ಶ್ರೀಮತಿ ಎಸ್ ಎಂ ಮಲಗಿಹಾಳ ,ಶ್ರೀ ಪಿ ಟಿ ಮೇಗಡಿ ಹಾಗೂ ಶ್ರೀಮತಿ ಸಾಯಿರಾ ಹೆರಕಲ್ ಉಪಸ್ಥಿತರಿದ್ದರು.
ವರದಿ ದಾವಲ್ ಶೇಡಂ