Ad imageAd image

ಪರಿಸರ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Bharath Vaibhav
WhatsApp Group Join Now
Telegram Group Join Now

ಸಿರುಗುಪ್ಪ : –ನಗರದ ಆದರ್ಶ ಶಾಲೆಯ ಹಿಂಬದಿಯಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಹಾಜಿ ಹುಸೇನ್‌ಸಾಬ್ ಯಾದವಾಡ ಅವರು ಗಿಡ ನೆಟ್ಟು ನೀರು ಹಾಕಿ ಉದ್ಘಾಟಿಸಿದರು.

ತಾಲೂಕು ಕಾನೂನುಗಳ ಸೇವಾ ಸಮಿತಿ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಸೇವಾ ಟ್ರಸ್ಟಿನ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಪ್ರತಿಜ್ಞಾವಿಧಿ ಭೋದಿಸಲಾಯಿತು.

ಟಿ.ಹೆಚ್.ಒ ಡಾ.ಈರಣ್ಣ ಹಾಗೂ ವಲಯ ಅರಣ್ಯಾಧಿಕಾರಿ ತೋಷನ್‌ಕುಮಾರ್ ಅವರು ಮಾತನಾಡಿ ಜೀವಸಂಕುಲದ ಆರೋಗ್ಯಕರ ವಾತಾವರಣಕ್ಕೆ ಉತ್ತಮ ಪರಿಸರ ಅಗತ್ಯವಾಗಿದ್ದು, ಮಕ್ಕಳಂತೆ ಮರಗಿಡಗಳನ್ನು ಬೆಳೆಸುವುದರೊಂದಿಗೆ ಪರಿಸರದಲ್ಲಾಗುವ ಅಸಮತೋಲನ ತಡೆಗಟ್ಟಬೇಕೆಂದರು.

ಇದೇ ವೇಳೆ ಮುಖಂಡರಾದ ಜೆ.ಎಮ್.ಎಫ್.ಸಿ ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದ, ಇ.ಓ.ಪವನ್‌ಕುಮಾರ್.ಎಸ್.ದಂಡಪ್ಪನವರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್, ಬಿ.ಎಮ್.ಸತೀಶ, ಹಿರಿಯ ವಕೀಲರಾದ ಹೆಡಗಿನಾಳ್ ವೆಂಕಟೇಶ ನಾಯಕ, ಎನ್.ಅಬ್ದುಲ್‌ನಬಿಸಾಬ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರಯ್ಯ,ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.

ವರದಿ. ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!