ನವದೆಹಲಿ: 1971ರ ಯುದ್ಧದಲ್ಲಿ ಅಸಾಧಾರಣ ಧೈರ್ಯ ಪುದರ್ಶಿಸಿದ್ದ ಮಹಿಳೆಯರ ಗುಂಪೊಂದು ನೀಡಿದ ಸಿಂಧೂರ ಸಸಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಪರಿಸರ ದಿನವಾದ ಇಂದು ತಮ್ಮ ನಿವಾಸದ ಗಾರ್ಡನ್ನಲ್ಲಿ ನೆಟ್ಟಿದ್ದಾರೆ.
ಈ ಸಸಿಯನ್ನು ಇತ್ತೀಚಿನ ಆವರೇಷನ್ ಸಿಂಧೂರಕ್ಕೆ ಗೌರವವಾರ್ಥಕವಾಗಿಯೂ ಪರಿಗಣಿಲಾಗುತ್ತಿದೆ.
ಈ ಸಸಿಯು ದೇಶದ ಮಹಿಳೆಯರ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. 1971ರ ಯುದ್ಧದಲ್ಲಿ ಅಸಾಧಾರಣ ಧೈರ್ಯತೋರಿದ ಮಹಿಳೆಯರ ಗುಂಪು ಇತ್ತೀಚೆಗೆ ಗುಜರಾತ್ನ ಕಚ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಸಿಂಧೂರ ಸಸಿಗಳನ್ನು ನೀಡಿತ್ತು ಎಂದು ಅವರು ತಿಳಿಸಿದ್ದಾರೆ.




