Ad imageAd image

ಬುದ್ದಿಮಾಂದ್ಯ ವಸತಿ ಶಾಲೆಯಲ್ಲಿ ವಿಶ್ವ ಛಾಯಾಗ್ರಾಹಣ ದಿನಾಚರಣೆ

Bharath Vaibhav
ಬುದ್ದಿಮಾಂದ್ಯ ವಸತಿ ಶಾಲೆಯಲ್ಲಿ ವಿಶ್ವ ಛಾಯಾಗ್ರಾಹಣ ದಿನಾಚರಣೆ
WhatsApp Group Join Now
Telegram Group Join Now

ಸಿರುಗುಪ್ಪ :– ತಾಲೂಕು ಪೋಟೋ ಮತ್ತು ವೀಡಿಯೋ ವೃತ್ತಿಪರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಗರದ ಜ್ಞಾನೋದಯ ಬುದ್ದಿಮಾಂದ್ಯ ಮಕ್ಕಳ ಉಚಿತ ವಸತಿಯುತ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ವಿಶ್ವ ಛಾಯಗ್ರಾಹಣ ದಿನಾಚರಣೆಯನ್ನು ಆಚರಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಅವರು ಮಾತನಾಡಿ ಪೋಟೋ ಕ್ಲಿಕ್ಕಿಸುವುದು ಸಾಮಾನ್ಯದ ಕೆಲಸವಲ್ಲ. ಮನುಷ್ಯನ ಜೀವನವಿಡಿಯ ಸವಿನೆನಪುಗಳನ್ನು ಪೋಟೊ ಮೂಲಕ ಗುರುತಿಸುವ ಕಾರ್ಯ ನಮ್ಮದಾಗಿರುತ್ತದೆ.

ಛಾಯಾಗ್ರಹಣವು ಅನೇಕ ಯುವಜನತೆಗೆ ಉದ್ಯೋಗವನ್ನು ನೀಡಿದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮವಾಗಿದ್ದು, ಇಂತಹ ಕಾರ್ಯವನ್ನು ಯುವಪ್ರತಿಭೆಗಳನ್ನು ಪ್ರೇರಿಸುವ ಸಲುವಾಗಿ ಚಿತ್ರಗಳನ್ನು ಪ್ರದರ್ಶಿಸುವ ಈ ದಿನವನ್ನು ವಿಶ್ವ ಛಾಯಗ್ರಾಹಣ ದಿನವೆಂದು ಆಚರಿಸಲಾಗುತ್ತದೆ.

ಈ ದಿನಾಚರಣೆಯನ್ನು ನಮ್ಮೆಲ್ಲರ ವೃತ್ತಿಪರರ ಸಹಕಾರದಿಂದ ಮಕ್ಕಳೊಂದಿಗೆ ಆಚರಿಸಿರುವುದು ನಮಗೆ ಸಂತೋಷಕರ ಸಂಗತಿಯಾಗಿದೆಂದರು.ಛಾಯಾಗ್ರಾಹಣ ದಿನಾಚರಣೆ ನಿಮಿತ್ತ ಶಾಲೆಯ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಇದೇ ವೇಳೆ ಶಾಲೆಯ ಮುಖ್ಯಗುರು ವಿರುಪಾಕ್ಷಗೌಡ, ಸಂಘದ ಗೌರವಾಧ್ಯಕ್ಷ ಯಲ್ಲನಗೌಡ, ಉಪಾಧ್ಯಕ್ಷ ಬಿ.ರವಿಕುಮಾರ, ಪ್ರಧಾನ ಕಾರ್ಯದರ್ಶಿ ವಿ.ಮಹೇಶ, ಖಜಾಂಚಿ ಬಿ.ವೀರೇಶ, ಸಹ ಕಾರ್ಯದರ್ಶಿಗಳಾದ ಶರಣ್, ಹರೀಶ್, ಮಹದೇವ ನಾಯಕ, ಕೆ.ವಿಶ್ವನಾಥ, ಸಂಘಟನಾ ಕಾರ್ಯದರ್ಶಿ ಹುಲುಗಪ್ಪ, ಶಿಕ್ಷಕರಾದ ರೆಹನಾಬೇಗಂ, ಮಹಾಂತೇಶ, ಮೀನಾಕ್ಷಿ, ರಾಧಾ, ನಿಲಯ ಪಾಲಕಿ ಅಶ್ವಿನಿ ಇನ್ನಿತರರಿದ್ದರು.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!