ನವದೆಹಲಿ: ಫೆ. ೭ ರಿಂದ ಆರಂಭವಾಗುವ ಟ್ವೆಂಟಿ-೨೦ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಆಡಿಸಲು ಐಸಿಸಿ ನರ‍್ಧರಿಸಿದೆ.
ಐಸಿಸಿ ಹೊರಡಿಸಿರುವ ಆಧಿಕೃತ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಹೊಸದಾಗಿ ವಿಶ್ವಕಪ್ ಸ್ಥಾನ ಪಡೆದ ಸ್ಕಾಟ್ಲೆಂಡ್ ‘ಸಿ’ ಗುಂಪಿನನಲ್ಲಿ ಸ್ಥಾನ ಪಡೆದಿದೆ. ಪುರುಷರ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿ ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ನಡೆಯಲಿದೆ. ಕ್ರೀಡಾ ಸುದ್ದಿ ಸಂಸ್ಥೆ ಕ್ರಿಕ್ ಬಜ್ ಮಾಡಿರುವ ವರದಿಯಲ್ಲಿ ಈ ವಿಷಯ ವರದಿಯಾಗಿದೆ.
ಪುರುಷರ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಗೆ ಬಾಂಗ್ಲಾದೇಶ್ ಬದಲು ಸ್ಕಾಟ್ಲೆಂಡ್




