Ad imageAd image

ಸಿ.ಐ.ಟಿ.ಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕಾರ್ಮಿಕ ದಿನಾಚರಣೆ

Bharath Vaibhav
ಸಿ.ಐ.ಟಿ.ಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕಾರ್ಮಿಕ ದಿನಾಚರಣೆ
WhatsApp Group Join Now
Telegram Group Join Now

ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶ್ರೀ ವೆಂಕ್ಟೇಶ್ವರ ದೇವಸ್ಥಾನದಿಂದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಲ್ಯಾಬ್ರಾರಿ ಪಕ್ಕದಲ್ಲಿ ಆಯೋಜಸಿದ ಸಿ.ಐ.ಟಿ.ಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಜರಗಿತು.

ಮೂರನೇ ಅವಧಿಗೆ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವ ಕೇಂದ್ರದ ಸರಕಾರ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡಿ ದುಡಿಯುವ ಜನರಿಗೆ ಸಿಗುತ್ತಿರುವ ಅಲ್ಪ-ಸ್ವಲ್ಪ ಸೌಲಭ್ಯಗಳನ್ನು ಕಸಿದುಕೊಂಡು ಬಂಡವಾಳದಾರರ ಜೇಬು ತುಂಬುಸುತ್ತಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಗೈಬು ಜೈನೆಖಾನ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದದಲ್ಲಿ ಸಿ.ಐ.ಟಿ.ಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕಡೆ ಬೆಲೆ ಏರಿಕೆಯ ಬಿಸಿಯಿಂದ ಜನರು ಕಂಗಾಲಾಗಿದ್ದಾರೆ. ಮತ್ತೊಂಡು ಕಡೆ ಕನಿಷ್ಠ ವೇತನ ಇಲ್ಲದೇ ಜನರ ಬದುಕು ದುಸ್ತರವಾಗಿದೆ, ಇಂತಹ ಸಮಯದಲ್ಲಿ ಕೇಂದ್ರ ಸರಕಾರ ರೈತ-ಕಾರ್ಮಿಕರ ಪರ ನಿಲ್ಲುವದನ್ನು ಬಿಟ್ಟು ಕಾರ್ಪೊರೇಟ ಕಂಪನಿಗಳ ಪರ ನಿಂತಿದ್ದು ದೇಶದಲ್ಲಿ ಅಶಾಂತಿ ತಲೆದೂರಲು ಕಾರಣ ಎಂದು ಅವರು ಆರೋಪಿಸಿದರು.

ರೈತ ಕಾರ್ಮಿಕರ ವಿರೋಧ ನೀತಿ ಖಂಡಿಸಿ ಮೇ.೨೦ ರಂದು ಬೆಳಗಾವಿಯಲ್ಲಿ ಜೈಲ್‌ಬರೋ ಚಳುವಳಿ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಮಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ನಾಗಪ್ಪ ಸಂಗೊಳ್ಳಿ, ಮುಖಂಡರಾದ ಎಸ್.ಜಿ.ಚಿಕ್ಕನರಗುಂದ, ಮಹ್ಮದ್‌ಶೆಫಿ ಬೆಣ್ಣಿ, ಬಿ.ಆರ್.ದೊಡಮನಿ, ರಾಜಶೇಖರ ಶೆಲವಡಿ, ಮಲ್ಲಿಕಾರ್ಜುನರಡ್ಡಿ ಗೊಂದಿ ಮಾತನಾಡಿದರು.

ಸಾಧಕರಿಗೆ ಸನ್ಮಾನ.

ಪ್ರಶಸ್ತಿ ಪುರಸ್ಕೃತ ಎಂ ಕೆ ಯಾದವಾಡ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ೨೦೨೪-೨೫ರ ದತ್ತನಿಧಿ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನರಡ್ಡಿ ಗೊಂದಿ, ಭೂಗರ್ಭಶಾಸ್ತದಲ್ಲಿ ಮೈಸೂರ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದಪದಕ ಪಡೆದ ರಾಮಾಪೂರದ ರೂಪಾ ಚನಬಸಪ್ಪ ಚೌದರಿ ಹಾಗೂ ಪಿಯುಸಿ ಯಲ್ಲಿ ಶೇ.೯೭ ರಷ್ಟು ಅಂಕ ಪಡೆದ ಓಬಳಾಪುರ ಕಾವೇರಿ ಈರಪ್ಪ ಬಡಿಗೇರ ಇವರನ್ನು ಕಾರ್ಯಕ್ರಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ರಾಮದುರ್ಗದಲ್ಲಿ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಕೃಷ್ಣಾ ಹೊಸೂರ, ಸರಸ್ವತಿ ಮಾಳಶೆಟ್ಟಿ, ಎಸ್. ಸಿ. ಪಾಟೀಲ, ಲಕ್ಷ್ಮಿ.ಎಂ. ಕರ್ಲನ್ನವರ, ಹನಮಂತ ಜಾಧವ, ಮಹಾಂತೇಶ ಪಾಶ್ಚಾಪೂರ,ತುಳಸಮ್ಮ ಮಾಳದಕರ, ಮಾಲಾ ಈಳಗೇರ, ರೇಖಾ ಪೂಜಾರ, ದೀಲೀಪ ಬೋವಿ, ಕೇಶವ ದಾಸರ, ಫಾರೂಖ ಶೇಖ, ಮಾಬೂಬ ನದಾಫ, ಮಾರುತಿ ಮುದುಗುರಿ, ಸಿದ್ದಂಗಪ್ಪ ಸಿಂಗಾರಗೊಪ್ಪ ಉಪಸ್ಥಿತರಿದ್ದರು.

ವರದಿ : ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!