ಹುನಗುಂದ : ತಾಲ್ಲೂಕಿನ ಐತಿಹಾಸಿಕ ಐಹೂಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ದಡದಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವಾಯ್ ಕೆ ವಾಲಿಕಾರ ಅವರು ಯೋಗದ ಮಹತ್ವ, ಯೋಗ ಮಾಡುವುದರಿಂದ ಆಗುವ ಉಪಯೋಗಗಳು, ಯೋಗಾಸನಗಳ ಬಗ್ಗೆ ತಿಳಿಸಿದರು.
ನಂತರ ಕೆರೆ ದಡದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಗೋಡಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಪಂ ಅಧ್ಯಕ್ಷ ಹನಮಂತಗೌಡ ಪಾಟೀಲೌ, ಮಲ್ಲಪ್ಪ ಕಬ್ಬರಗಿ, ದ್ವಿತೀಯ ಲೆಕ್ಕ ಸಹಾಯಕ ಹನುಮಂತ ಕುರಿ, ಎಸ್ ಡಿಎಂಸಿ ಅಧ್ಯಕ್ಷರಾದ ಶರಣಪ್ಪ ಗೋಡಿ, ಕಾಯಕಮಿತ್ರ ಸುಮಂಗಲಾ ಮಾದರ, ಕಾಯಕಬಂಧುಗಳಾದ ಸಾರೇಪ್ಪ ಮಾದರ, ಗ್ರಾಪಂ ಸಿಬ್ಬಂದಿ ವರ್ಗ, ಎನ್ ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.