Ad imageAd image

ದಾವಣಗೆರೆ : ಅಂದಾಜು 30 ಕೋಟಿ ರೂಪಾಯಿ ಕಾಮಗಾರಿಗೆ ಪೂಜೆ ಹಾಗೂ ಚಾಲನೆ

Bharath Vaibhav
ದಾವಣಗೆರೆ : ಅಂದಾಜು 30 ಕೋಟಿ ರೂಪಾಯಿ ಕಾಮಗಾರಿಗೆ ಪೂಜೆ ಹಾಗೂ ಚಾಲನೆ
WhatsApp Group Join Now
Telegram Group Join Now

ದಾವಣಗೆರೆ: ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ  ಸತೀಶ್  ಜಾರಕಿಹೊಳಿ ಅವರು ಇಂದು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಲೋಕಿಕೆರೆ ಗ್ರಾಮದಿಂದ ದಾವಣಗೆರೆವರೆಗೆ ಸಿಸಿ ರಸ್ತೆ ಕಾಮಗಾರಿಗೆ ₹6 ಕೋಟಿ ವೆಚ್ಚದ ಗುದ್ದಲಿ ಪೂಜೆ ಮಾಡಿದರು.

ಬಾವಿಹಾಳು ಗ್ರಾಮದಿಂದ ಗಂಗನಕಟ್ಟೆ, ಕೊಡಗನೂರುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹12 ಕೋಟಿ ವೆಚ್ಚದ ಗುದ್ದಲಿ ಪೂಜೆ ನೆರವೇರಿಸಿದರು. ಲೋಕಿಕೆರೆ, ಶ್ಯಾಗಲೇ, ಹೂವಿನಮಡು ರಸ್ತೆ ಕಾಮಗಾರಿಗೆ ₹8 ಕೋಟಿ ವೆಚ್ಚದ ಗುದ್ದಲಿ ಪೂಜೆ ಮಾಡಿದರು.

ನರಗನಹಳ್ಳಿ, ಮಾಯಕೊಂಡ, ಗುಮ್ಮನೂರು, ಕೊಡಗನೂರು, ಬಾಡ ಸೇರಿದಂತೆ ಇತರ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಅಣಜಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ, ಕಾಟೀಹಳ್ಳಿ ಗ್ರಾಮದಲ್ಲಿ ನೂತನ ಸಮುದಾಯ ಭವನದ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ  ಕೆ.ಎಸ್. ‌ಬಸವಂತಪ್ಪ ಅವರು ಹಾಗೂ ಸ್ಥಳೀಯ ‌ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!