ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಐತಿಹಾಸಿಕ ಕಾರ್ಯವಾದರೆ
ನಿಪ್ಪಾಣಿ : ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಿಸಿ ಐತಿಹಾಸಿಕ ಕಾರ್ಯ ಕೈಗೊಂಡಿದ್ದು ಸದಲಗಾ ಪಟ್ಟಣದಲ್ಲಿಂದು ಶ್ರೀರಾಮ ಹನುಮ ಮೂರ್ತಿಗೆ ಜೊಲ್ಲೆ ದಂಪತಿಗಳಿಂದ ಪೂಜೆ ಮಾಡುವ ಭಾಗ್ಯ ಒದಗಿ ಬಂದಿದ್ದು ನಮ್ಮ ಅದೃಷ್ಟವೆಂದು ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅನ್ನಾಸಾಹೇಬ ಜೊಲ್ಲೆ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಶ್ರೀರಾಮ ಹಾಗೂ ಭಕ್ತ ಹನುಮಾನ್ ಮೂರ್ತಿಯ ಭವ್ಯ ಮೆರವಣಿಗೆಯ ಮುಂಚೆ ಪ್ರತಿಮೆ ಪೂಜೆ ಮಾಡಿ ಅವರು ಮಾತನಾಡಿದರು.
ಪ್ರಾರಂಭದಲ್ಲಿ ಡಾಕ್ಟರ್ ಶ್ರದ್ದಾನಂದ್ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪಟ್ಟಣದ ಶಿವಾಜಿ ವೃತ್ತದಲ್ಲಿಯ ಶಿವಾಜಿ ಪ್ರತಿಮೆಗೆ ಪೂಜೆ ನೆರವೇರಿತು. ತದನಂತರ ಶ್ರೀರಾಮ ಹನುಮಾನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜಿಸಲ್ಲಿಸಿದರು ಆಮೇಲೆ ಡಾಲ್ವಿ ಸೇರಿ ವಿವಿಧ ವಾದ್ಯಗಳ ಮಧ್ಯೆ ಪ್ರತಿಮೆಗಳ ಭವ್ಯ ಮೆರವಣಿಗೆ ಹೊರಟು ಬಸ್ ನಿಲ್ದಾಣ ಚನ್ನಮ್ಮ ವೃತ್ತ, ದರ್ಗಾ ಚೌಕ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ತಡೆರಾತ್ರಿಯವರಿಗೆ ಮೆರವಣಿಗೆ ನಡೆಯಿತು.
ಒಂದೆಡೆ ಡಾಲ್ಬಿ ರಣ ಕಹಳೆ ವಾದ್ಯಗಳ ಮಧ್ಯೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಮೆರವಣಿಗೆಗೆ ಮೆರಗು ತಂದರು. ಅದರಲ್ಲೂ ವಿಶೇಷವಾಗಿ ಜೊಲ್ಲೆ ದಂಪತಿಗಳು ದ್ವಜ ಹಿಡಿದು ಸಹಭಾಗಿತ್ವ ತೋರಿದ್ದು ನೋಡುಗರ ಕಣ್ಮನ ಸೆಳೆಯಿತು.
ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಮಹಾವೀರ ಚಿಂಚಣೆ