ಚಿಕ್ಕಬಳ್ಳಾಪುರ :ಜಿಲ್ಲೆ ಚಿಂತಾಮಣಿ ನಗರದಲ್ಲಿ ಇಂದು ಎ ಪಿ ಎಂ ಸಿ ಮಾರ್ಕೆಟ್ ಬಳಿ, ಗುಣಿಗಳಿಂದ ಮಳೆ ನೀರು ತುಂಬಿ ಕೆಸರು ಕದ್ದೆಯಂಥಾಗಿದೆ, ಅಲ್ಲದೇ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಆಟೋ ಮತ್ತು ಇನ್ನಿತರೇ ವಾಹನಗಳಿಗೆ ಗುಣಿಗಳಿಂದ ಅಪಘಾತಗಳನ್ನು ಉಂಟುಮಾಡಿದೆ, ಇದರ ಬಗ್ಗೆ ಕೆ ಆರ್ ಎಸ್ ಅಧ್ಯಕ್ಷರು ಹಾಗೂ ಮುಖಂಡರು ಸಾರ್ವಜನಿಕರು ರಸ್ತೆಯನ್ನು ಸರೀ ಪಡಿಸಬೇಕು ಎಂದು ಜೈಕಾರ ಹಾಕಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಅಬ್ದುಲ್ ಕೈಯುಂ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಭಾಷಾ ತಾಲ್ಲೂಕು ಕಾರ್ಯದರ್ಶಿ ವಿಶ್ವನಾಥ, ಆಟೋ ಘಟಕದ ಅಧ್ಯಕ್ಷರಾದ ಮೆಹಬೂಬ್, ಚಂದ್ರು, ಆಫ್ಜಲ್, ಸರ್ದಾರ್, ಸಿದ್ದಣ್ಣ, ನಾರಾಯಣಸ್ವಾಮಿ, ಪೈರೋಜ್ ಇನ್ನು ಹಲವರು ಮತ್ತು ಉಪಸ್ಥಿತರಿದ್ದರು.
ವರದಿ:ಯಾರಬ್. ಎಂ.




