———ಅಕ್ಟೋಬರ್ 4 ರಂದು ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಕ್ಕೆ ಮೈದಾನ ಸಜ್ಜು
———-ಸಿದ್ದೇಶ್ವರ ದಸರಾ ಮಹೋತ್ಸವ ಕುಸ್ತಿ ಕಮಿಟಿ ಅಧ್ಯಕ್ಷ ಸುನೀಲ ನಾರೆಯವರಿಂದ ಮಾಹಿತಿ

ನಿಪ್ಪಾಣಿ: ಮೈಸೂರಿನ ನಂತರ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿ ಆಚರಿಸುವ ನಿಪ್ಪಾನಿ ತಾಲೂಕಿನ ಬೇಡಕಿಹಾಳ ಗ್ರಾಮದ ಸಿದ್ದೇಶ್ವರ ದಸರಾ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಗ್ರಾಮ ಸಿದ್ದವಾಗಿದ್ದು ಮಧುವನಗಿತ್ತಿಯಂತೆ ಶೃಂಗಾರ ಗೊಂಡಿದೆ.

ನಾಳೆ ಸೋಮವಾರ 22ರಂದು ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗುವ ದಸರಾ ಉತ್ಸವ ಕರ್ನಾಟಕ ಮಹಾರಾಷ್ಟ್ರದ ರಾಜ್ಯಗಳಿಗೆ ಅಷ್ಟೇ ಅಲ್ಲ ದೇಶಕ್ಕೆ ಮಾದರಿಯಾಗಿದೆ. ಅಕ್ಟೋಬರ್ 1ರಂದು ಮಹಾಜಾಗರಣೆ 2ರಂದು ಖಂಡೆನವಮಿ 3ರಂದು ವಿಜಯಾದಶಮಿಯಂದು ಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ, ಕೊನೆಯ ದಿನ ಅಕ್ಟೋಬರ್ 4 ರಂದು ಅಂತರಾಷ್ಟ್ರೀಯ ಮಟ್ಟದ ಖ್ಯಾತ ಜಟ್ಟಿಗಳ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿದ್ದು 30 ಸಾವಿರ ಪ್ರೇಕ್ಷಕರು ಸಹಜವಾಗಿ ವೀಕ್ಷಿಸುವಂತಹ ಕೊಲ್ಲಾಪುರದ ಖ್ಯಾತ ಖಾಸಬಾಗ ಮೈದಾನ ಮಾದರಿಯಲ್ಲಿ ನಿರ್ಮಿಸಲಾದ ಕುಸ್ತಿ ಮೈದಾನ ರಸಿಕರಿಗೆ ಹುರಿದುಂಬಿಸಲಿದೆ.
ಮೈದಾನದಲ್ಲಿ ಜಟ್ಟಿಗಳ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯ ಸ್ನಾನಗ್ರಹ ನೀರಿನ ವ್ಯವಸ್ಥೆ ಮೈದಾನ ಸುತ್ತಲಿನ ಪರಿಸರ ಸ್ವಚ್ಛಗೊಳಿಸಲಾಗಿದ್ದು ಮೈದಾನದಲ್ಲಿಯ ಕೆಂಪು ಮಣ್ಣು ಸುರಕ್ಷತೆ ಕಟಿ ಕಟ್ಟಿಗೆಗಳನ್ನು ನಿರ್ಮಿಸಿ ಕುಸ್ತಿಗಳ ಕುಸ್ತಿಪಟುಗಳ ಸೆಣೆಸಾಟಕ್ಕೆ ಮೈದಾನ ಸಜ್ಜಾಗಿದೆ ಎಂದು ಸಿದ್ದೇಶ್ವರ ದಸರಾ ಮಹೋತ್ಸವ ಕುಸ್ತಿ ಕಮಿಟಿ ಅಧ್ಯಕ್ಷ ಸುನಿಲ್ ನಾರೇ ತಿಳಿಸಿದರು.
ವರದಿ: ಮಹಾವೀರ ಚಿಂಚಣೆ




